×
Ad

3A ನಲ್ಲಿರುವ ಕೊಡಗರು ಇನ್ಮುಂದೆ ಕೊಡವ/ಕೊಡವರು: ಸಚಿವ ಸಂಪುಟ ನಿರ್ಧಾರ

Update: 2023-07-27 22:37 IST

ಬೆಂಗಳೂರು : ಹಿಂದುಳಿದ ವರ್ಗಗಳ ಆಯೋಗದ ಸಲಹೆ ಹಾಗೂ ಹೈಕೋರ್ಟ್‍ನ ಆದೇಶದಂತೆ ಹಿಂದುಳಿದ ವರ್ಗಗಳ ಜಾತಿಯ ಪಟ್ಟಿಯಲ್ಲಿನ ಪ್ರವರ್ಗ 3ಎ ಕ್ರಮ ಸಂಖ್ಯೆ 2ರಲ್ಲಿ ನಮೂದಾಗಿರುವ ‘ಕೊಡಗರು’ ಎಂಬುದರ ಬದಲಾಗಿ ‘ಕೊಡವ’ ಮತ್ತು ‘ಕೊಡವರು’ ಎಂದು ಬದಲಾಯಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. 

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಈ ಕುರಿತು ಅನೇಕ ಮನವಿಗಳು ಬಂದಿದ್ದವು ಸರ್ಕಾರ ಹಂತದಲ್ಲಿ ನಿರ್ಣಯ ಮಾಡಲು ಶಿಫಾರಸ್ಸು ಮಾಡಲಾಗಿತ್ತು. ಹಾಗಾಗಿ ಇಂದು ಸಂಪುಟದಲ್ಲಿ ಅನುಮೋದನೆ ಮಾಡಲಾಗಿದೆ' ಎಂದು ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News