×
Ad

ಸಿಡಿಲು ಬಡಿದು ಮೂವರು ಕಾರ್ಮಿಕರಿಗೆ ಗಾಯ; ಆಸ್ಪತ್ರೆಗೆ ದಾಖಲು

Update: 2023-10-31 09:54 IST

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಮೂವರು ಗಾರೆ ಕೆಲಸ ಮಾಡುವ ಕೂಲಿ ಕಾರ್ಮಿಕರು ಸಿಡಿಲು ಬಡಿದು ಗಾಯಗೊಂಡಿರುವ ಘಟನೆ ವರದಿಯಾಗಿದೆ. 

ತಾಲೂಕಿನ ಬಂಡಳ್ಳಿ ಗ್ರಾಮದ ವೀರಶೈವ ಬಡಾವಣೆಯ ಮಂಜು, ಗುರುಸ್ವಾಮಿ ಹಾಗೂ ಗುರು ಎಂಬುವವರು ಸೋಮವಾರ ಸಂಜೆ 5.30ರ ಸುಮಾರಿಗೆ ಗಾರೆ ಕೆಲಸ ಮುಗಿಸಿ ಚಿಂಚಳ್ಳಿಯಿಂದ ಮಣಗಳ್ಳಿ ಮಾರ್ಗವಾಗಿ ಬರುತ್ತಿದ್ದಾಗ ಸಿಡಿಲು ಬಡಿದಿದೆ. ತಕ್ಷಣ ಅವರನ್ನು ಹೋಲಿಕ್ರಾಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ʼಮೂವರ ಪೈಕಿ ಗುರು ಎಂಬುವವರಿಗೆ ಸಿಡಿಲು ಬಡಿದಿರುವುದರಿಂದ ಕಾಲಿನಲ್ಲಿ ಸುಟ್ಟ ಗಾಯವಾಗಿದೆ. ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಇನ್ನಿಬ್ಬರಿಗೆ ಯಾವುದೇ ಗಂಭೀರ ಗಾಯಗಳಗಿಲ್ಲ. ಮೂವರಿಗೂ ಪ್ರಾಣಾಪಾಯವಿಲ್ಲʼ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News