×
Ad

ವಿಜಯನಗರ | ಏಳು ವರ್ಷದ ಬಾಲಕನನ್ನು ಕಾಲುವೆಗೆ ಎಸೆದು ಕೊಲೆ: ಆರೋಪಿಯ ಬಂಧನ

Update: 2024-10-26 10:38 IST

ಕೊಲೆಯಾದ ಬಾಲಕ ಅಭಿ(ಎಡಚಿತ್ರ) | ಬಂಧಿತ ಆರೋಪಿ ಓಬಳೇಶ

ವಿಜಯನಗರ, ಅ.26: ವ್ಯಕ್ತಿಯೋರ್ವ ಏಳು ವರ್ಷದ ಬಾಲಕನ್ನು ಹರಿಯುವ ನೀರಿನ ಅಡವಿ (ಎಚ್.ಎಲ್.ಸಿ.) ಕಾಲುವೆಗೆ ಎಸೆದು ಕೊಲೆಗೈದಿರುವ ಘಟನೆ ಕಮಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ, ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಮಲಾಪುರದ ರಾಜಮ್ಮ ಮತ್ತು ಬಾಬು ದಂಪತಿಯ ಪುತ್ರ ಅಭಿ(7) ಕೊಲೆಯಾದ ಬಾಲಕ. ಕಮಲಾಪುರ ನಿವಾಸಿ ಓಬಳೇಶ್ (24) ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಪರಿಚಯಸ್ಥನಾಗಿದ್ದ ಓಬಳೇಶ ಅ.22ರಂದು ಬೆಳಗ್ಗೆ ಅಭಿಯನ್ನು ತನ್ನ ಸ್ಕೂಟರ್ ನಲ್ಲಿ ಶಾಲೆಗೆ ಕರೆದುಕೊಂಡು ಹೋಗಿದ್ದಾನೆ. ಶಾಲೆಯಲ್ಲಿ ಬ್ಯಾಗ್ ಇರಿಸಿ ಅಭಿಯನ್ನು ಮತ್ತೆ ಕರೆದುಕೊಂಡು ಕಮಲಾಪುರ ಗಾರೆ ಭಾವಿ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿರುವ ಪಿ.ಕೆ.ಹಳ್ಳಿ ರಸ್ತೆ ಮಧ್ಯದಲ್ಲಿರುವ ಅಡವಿ (ಎಚ್ ಎಲ್ ಸಿ) ಕಾಲುವೆ ಮೇಲಿನ ಸೇತುವೆಯಿಂದ ಕೆಳಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನ ಮೃತದೇಹ ಕುರೇಕುಪ್ಪದ ಬಳಿ ಕಾಲುವೆಯಲ್ಲಿ ಪತ್ತೆಯಾಗಿದೆ.

ಮೃತ ಬಾಲಕನ ತಾಯಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಕಲಮಾಪುರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News