×
Ad

ಕೊಡಗು: ಸಹೋದರರಿಂದಲೇ ಅಣ್ಣನ ಕೊಲೆ

Update: 2023-07-14 15:57 IST

ಮಡಿಕೇರಿ: ಆಸ್ತಿ ವಿವಾದ ಹಿನ್ನಲೆಯಲ್ಲಿ ಸ್ವಂತ ತಮ್ಮಂದಿರೇ ಅಣ್ಣನನ್ನು ಕೊಚ್ಚಿ ಕೊಲೆಗೈದ ಘಟನೆ ಸಂಪಾಜೆ ಸಮೀಪದ ಚೆಂಬು ಗ್ರಾಮದಿಂದ ವರದಿಯಾಗಿದೆ.

ಕೊಲೆಯಾದ ವ್ಯಕ್ತಿಯನ್ನು ಕುದ್ರೆಪಾಯ ನಿವಾಸಿ ಉಸ್ಮಾನ್ ಎಂದು ಗುರುತಿಸಲಾಗಿದೆ. ಕುದ್ರೆಪಾಯದಲ್ಲಿ ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಸಹೋದರರಿಗೆ ಕುದ್ರೆಪಾಯದಲ್ಲಿ ಸುಮಾರು 50 ಎಕ್ರೆ ಕೃಷಿ ಭೂಮಿಯಿದ್ದು, ಜಾಗದ ತಕರಾರಿನಿಂದಾಗಿ ಸಹೋದರರು ಸೇರಿ ಉಸ್ಮಾನ್ ರನ್ನು ಇಂದು ಚೂರಿಯಿಂದ ಇರಿದು ಕೊಂದಿದ್ದಾರೆ ಎಂದು ತಿಳಿದು ಬಂದಿದೆ.

ಉಸ್ಮಾನ್ ಅವರಿಗೆ ಕುದ್ರೆಪಾಯದಲ್ಲಿ ಮಾತ್ರವಲ್ಲದೇ ಅರಂತೋಡಿನಲ್ಲೂ ಜಾಗವಿದೆ ಎನ್ನಲಾಗಿದೆ. ಸದ್ಯ ಇವರು ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದರು ತಿಳಿದು ಬಂದಿದೆ. ಸಂಪಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News