ಈಶಾನ್ಯ ದಿಲ್ಲಿ: ಬಿಗಿ ಭದ್ರತೆಯಲ್ಲಿ ದೇಗುಲ, ದರ್ಗಾ ಧ್ವಂಸಗೊಳಿಸಿದ ಪಿಡಬ್ಲ್ಯುಡಿ
Update: 2023-07-02 10:35 IST
ಸಾಂದರ್ಭಿಕ ಚಿತ್ರ \ Photo: PTI
ಹೊಸದಿಲ್ಲಿ: ದಿಲ್ಲಿಯ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ರವಿವಾರ ಬೆಳಗ್ಗೆ ಭಜನ್ಪುರ ಚೌಕ್ ನಲ್ಲಿ ಹನುಮಾನ್ ಮಂದಿರ ಹಾಗೂ ದರ್ಗಾವನ್ನು ಕೆಡವುವ ಕಾರ್ಯಾಚರಣೆಯನ್ನು ನಡೆಸಿತು.
ದೇಗುಲ ಹಾಗೂ ದರ್ಗಾ ಧ್ವಂಸ ಮಾಡುವಾಗ ಯಾವುದೇ ಅನಗತ್ಯ ಘಟನೆಗಳು ನಡೆಯದಂತೆ ಹೆಚ್ಚಿನ ಸಂಖ್ಯೆಯ ಪೊಲೀಸರು ಹಾಗೂ ಸಿಆರ್ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಸಹರಾನ್ಪುರ ಹೆದ್ದಾರಿಗಾಗಿ ರಸ್ತೆ ಅಗಲೀಕರಣಕ್ಕಾಗಿ ದೇವಸ್ಥಾನ ಹಾಗೂ ದರ್ಗಾವನ್ನು ಕೆಡವಲಾಗುತ್ತಿದೆ.
"ಭಜನಪುರ ಚೌಕ್ ನಲ್ಲಿ ಶಾಂತಿಯುತವಾಗಿ ನೆಲಸಮ ಕಾರ್ಯಾಚರಣೆ ನಡೆಯುತ್ತಿದೆ. ದಿಲ್ಲಿಯ ಧಾರ್ಮಿಕ ಸಮಿತಿಯು ಸಹರಾನ್ಪುರ ಹೆದ್ದಾರಿಗಾಗಿ ರಸ್ತೆಯನ್ನು ಮತ್ತಷ್ಟು ವಿಸ್ತರಿಸಲು ಹನುಮಾನ್ ದೇವಾಲಯ ಹಾಗೂ ಮಝಾರ್ ಅನ್ನು ಕೆಡವಲು ನಿರ್ಧರಿಸಿದೆ'' ಎಂದು ಈಶಾನ್ಯ ಡಿಸಿಪಿ ಜಾಯ್ ಎನ್ ಟಿರ್ಕಿ ಹೇಳಿದ್ದಾರೆ.