×
Ad

ದಾಖಲೆ ಬರೆದ ದಲಾಲ್ ಸ್ಟ್ರೀಟ್: 64 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್

Update: 2023-06-29 08:38 IST

ಫೋಟೋ: PTI

ಮುಂಬೈ: ಷೇರುಪೇಟೆಯಲ್ಲಿ ಸೆನ್ಸೆಕ್ಸ್ ನಾಗಾಲೋಟ ಮುಂದುವರಿದಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬುಧವಾರ ಒಂದು ಹಂತದಲ್ಲಿ ಸೆನ್ಸೆಕ್ಸ್ 64 ಸಾವಿರದ ಗಡಿ ದಾಟಿತು.

ಮೇ ತಿಂಗಳಲ್ಲಿ ವಿದೇಶಿ ನಿಧಿಗಳು ಭಾರತೀಯ ಷೇರುಗಳನ್ನು ವ್ಯಾಪಕವಾಗಿ ಖರೀದಿಸಲು ಆರಂಭಿಸಿದ ಕಾರಣದಿಂದ ಕಳೆದ ಹಲವು ತಿಂಗಳಿಂದ ಷೇರುಪೇಟೆಯಲ್ಲಿ ಚೇತರಿಕೆ ಕಂಡುಬಂದಿತ್ತು. ಏತನ್ಮಧ್ಯೆ ಅಮೆರಿಕದ ಫೆಡ್ಬ್ಯಾಂಕ್ ಹೇಳಿಕೆ, ಯೂರೋಪಿಯನ್ ಕೇಂದ್ರೀಯ ಬ್ಯಾಂಕ್ಗಳಿಂದ ಅಚ್ಚರಿಯ ಬಡ್ಡಿದರ ಏರಿಕೆ ಹಾಗೂ ಚೀನಾದ ಆರ್ಥಿಕ ದುರ್ಬಲತೆಯ ಸೂಚನೆಗಳಿಂದಾಗಿ ಆರು ತಿಂಗಳ ಹಿಂದೆ ನಿರ್ಮಾಣವಾಗಿದ್ದ 63688 ಅಂಕಗಳ ಐತಿಹಾಸಿಕ ದಾಖಲೆ ಬುಧವಾರ ಪತನಗೊಂಡಿತು.

ಅಂತಿಮವಾಗಿ 63915 ಅಂಕಗಳೊಂದಿಗೆ ಷೇರುಪೇಟೆಯಲ್ಲಿ ವಹಿವಾಟು ಮುಕ್ತಾಯಗೊಂಡಿತು

ಒಂದೇ ದಿನದಲ್ಲಿ 499 ಅಂಕಗಳ ಏರಿಕೆ ಕಂಡುಬಂದಿದ್ದು, ಶೇಕಡ 0.8ರಷ್ಟು ಏರಿಕೆ ದಾಖಲಾಗಿದೆ. ಎನ್ಎಸ್ಇಯಲ್ಲಿ ಕೂಡಾ ಇದೇ ಪ್ರವೃತ್ತಿ ಕಂಡುಬಂದಿದ್ದು, ಮೊದಲ ಬಾರಿಗೆ 19 ಸಾವಿರದ ಗಡಿ ದಾಟಿ, ದಿನದ ಅಂತ್ಯದಲ್ಲಿ 18972 ಅಂಕ ದಾಖಲಾಯಿತು. ಇದು ಹಿಂದಿನ ದಿನಕ್ಕೆ ಹೋಲಿಸಿದರೆ ಶೇಕಡ 0.8ರಷ್ಟು ಅಂದರೆ 155 ಅಂಕಗಳಷ್ಟು ಅಧಿಕ.

ಬುಧವಾರ ಸೆನ್ಸೆಕ್ ಸಾರ್ವಕಾಲಿಕ ದಾಖಲೆಯಾದ 64050ನ್ನು ಹಾಗೂ ನಿಫ್ಟಿ 19011ನ್ನು ತಲುಪಿತು. ದೇಶೀಯ ಹಾಗೂ ಜಾಗತಿಕ ಅಂಶಗಳು ಕಳೆದ ಕೆಲ ವಾರಗಳಿಂದ ಷೇರುಪೇಟೆಯ ನಾಗಾಲೋಟಕ್ಕೆ ಕಾರಣವಾಗಿದೆ ಎಂದು ದಲ್ಲಾಳಿಗಳು ಮತ್ತು ವಿಶ್ಲೇಷಕರು ಹೇಳುತ್ತಾರೆ. ಪ್ರಬಲವಾದ ಸಾಂಸ್ಥಿಕ ಹರಿವು, ಆರೋಗ್ಯಕರ ವಿಸ್ತøತ ಆರ್ಥಿಕ ಸ್ಥಿತಿ ಹಾಗೂ ಆಕರ್ಷಕ ಆದಾಯ ಪ್ರಗತಿ, ಷೇರುಪೇಟೆಯನ್ನು ಉನ್ನತಿಯತ್ತ ಒಯ್ದಿವೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸಸ್ನ ಚಿಲ್ಲರೆ ಸಂಶೋಧನೆ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.

ಕಳೆದ ಮೇ ತಿಂಗಳಿಂದೀಚೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 85 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿರುವುದು ಸಿಡಿಎಸ್ಎಲ್ ಹಾಗೂ ಬಿಎಸ್ಇ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಮಾರ್ಚ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡ 6.1ರಷ್ಟು ಏರಿಕೆಯಾಗಿದೆ ಹಾಗೂ ಜಿಎಸ್ಟಿ ಮತ್ತು ನೇಋ ತೆರಿಗೆಗಳು ಎರಡಂಕಿಯ ಪ್ರಗತಿ ದಾಖಲಿಸಿವೆ ಎಂದು ಕಳೆದ ತಿಂಗಳು ಸರ್ಕಾರ ಹೇಳಿಕೆ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News