×
Ad

ಹತ್ತರ ಹರೆಯದ ಬಾಲಕಿಗೆ ಚಿತ್ರಹಿಂಸೆ ನೀಡಿದ್ದ ಪೈಲಟ್‌ ಮತ್ತು ಪತಿಗೆ ಜನರಿಂದ ಥಳಿತ

Update: 2023-07-19 18:55 IST

Photo: PTI

ಹೊಸದಿಲ್ಲಿ: 10 ವರ್ಷದ ಬಾಲಕಿಯನ್ನು ಮನೆಕೆಲಸಕ್ಕಿಟ್ಟು ಆಕೆಯ ಮೇಲೆ ದೌರ್ಜನ್ಯ ನಡೆಸಿದ ಆರೋಪದಲ್ಲಿ ಇಂಡಿಗೋ ವಿಮಾನದ ಪೈಲಟ್ ಮತ್ತು ಪತಿಗೆ ಗುಂಪೊಂದು ಥಳಿಸಿರುವ ಘಟನೆ ನಡೆದಿದೆ.

ದಿಲ್ಲಿಯ ದ್ವಾರ್ಕಾದಲ್ಲಿ ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2 ತಿಂಗಳ ಹಿಂದೆ ಮನೆಕೆಲಸಕ್ಕಾಗಿ ಬಾಲಕಿಯನ್ನು ನೇಮಿಸಿದ್ದ ದಂಪತಿ ಬಾಲಕಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಬಾಲಕಿಯ ಕೈಗಳಲ್ಲಿ ಗಾಯದ ಗುರುತುಗಳು ಕಂಡು ಬಂದ ನಂತರ ಆಕೆಯ ಸಂಬಂಧಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.

ದಂಪತಿ ಬಾಲಕಿಯ ಹಲ್ಲೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ನೆರೆಹೊರೆಯವರಿಗೂ ಲಭಿಸಿತ್ತು. ಬಾಲಕಿಯ ಕಣ್ಣು ಮತ್ತು ಕೈಗಳಲ್ಲಿ ಗಾಯಗಳ ಗುರುತು ಕಂಡು ಬಂದ ನಂತರ ಸಾರ್ವಜನಿಕರು ಗುಂಪುಗೂಡಿ ದಂಪತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ‌.

ಮಾಹಿತಿ ಅರಿತು ಪೊಲೀಸರು ಸ್ಥಳಕ್ಕಾಗಮಿಸಿದ್ದು, ದಂಪತಿಯನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News