×
Ad

2023ರಲ್ಲಿಯೂ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಸಿಗಲಿ: 5 ವರ್ಷಗಳ ಹಿಂದೆ ಮೋದಿ ಹೇಳಿದ್ದ ವಿಡಿಯೊ ವೈರಲ್

Update: 2023-07-26 19:52 IST

ಹೊಸದಿಲ್ಲಿ: ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಲು ವಿಪಕ್ಷಗಳು ಸಿದ್ಧತೆ ನಡೆಸಿರುವ ನಡುವೆ ಇಂತಹುದೇ ನಿಲುವಳಿಯನ್ನು 2018ರಲ್ಲಿ ಮಂಡಿಸಿದಾಗ ಆಗ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಉತ್ತರ ಈಗ ವೈರಲ್‌ ಆಗಿದೆ. ಇಂತಹುದೇ ಕ್ರಮವನ್ನು 2023ರಲ್ಲೂ ಕೈಗೊಳ್ಳಲು ಸಿದ್ಧತೆ ನಡೆಸಬೇಕೆಂದು ಆಗ ಪ್ರಧಾನಿ ವಿಪಕ್ಷಗಳಿಗೆ ಹೇಳಿದ್ದರು.

“ನಿಮಗೆ 2023ರಲ್ಲಿ ಮತ್ತೆ ಅವಿಶ್ವಾಸ ನಿಲುವಳಿ ಮಂಡಿಸಲು ಅವಕಾಶ ದೊರೆಯಲೆಂದು ಹಾಗೂ ನೀವು ಅದಕ್ಕೆ ತಯಾರಿ ನಡೆಸಲು ನಿಮಗೆ ಶುಭ ಹಾರೈಸುತ್ತೇನೆ” ಎಂದು 2018ರ ಅವಿಶ್ವಾಸ ನಿಲುವಳಿಗೆ ಉತ್ತರಿಸುವ ವೇಳೆ ಮೋದಿ ಹೇಳಿದ್ದರು.

ಮೋದಿ ಅವರ “ಭವಿಷ್ಯವಾಣಿ”ಯನ್ನು ಎದ್ದುಗಾಣಿಸಲೆಂದೇ ಅವರ 2018ರ ಭಾಷಣದ ತುಣುಕನ್ನು ಸರ್ಕಾರಿ ಮೂಲಗಳೇ ಶೇರ್‌ ಮಾಡಿವೆ ಎನ್ನಲಾಗಿದೆ.

“ಕಾಂಗ್ರೆಸ್‌ ಪಕ್ಷದ ಅಹಂಕಾರದಿಂದಲೇ ಒಂದು ಕಾಲದಲ್ಲಿ 400ಕ್ಕೂ ಅಧಿಕ ಸ್ಥಾನಗಳನ್ನು ಹೊಂದಿದ ಪಕ್ಷದ ಸ್ಥಾನಗಳು 2014 ಲೋಕಸಭಾ ಚುನಾವಣೆ ವೇಳೆ 40ಕ್ಕೆ ಇಳಿದಿತ್ತು. ಅದೇ ಸಮಯ ಬಿಜೆಪಿಯ ಸೇವಾ ಮನೋಭಾವವೇ ಒಂದು ಕಾಲದ ಎರಡು ಸ್ಥಾನಗಳಿಂದ ಈಗ ತನ್ನ ಸ್ವಂತ ಬಲದಿಂದ ಅಧಿಕಾರ ಪಡೆಯುವುದಕ್ಕೆ ಸಾಧ್ಯವಾಗಿದೆ,” ಎಂದು ಮೋದಿ ಆಗ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News