×
Ad

ಲೋಕಾಯುಕ್ತ ಅಧಿಕಾರಿಗಳನ್ನು ನೋಡಿ ಲಂಚದ ಹಣವನ್ನೇ ನುಂಗಿದ ಅಧಿಕಾರಿ !

Update: 2023-07-25 13:16 IST

ಜಬಲ್ಪುರ್: ಮಧ್ಯ ಪ್ರದೇಶದ ಕತ್ನಿ ಎಂಬಲ್ಲಿನ ಕಂದಾಯ ವಿಭಾಗದ ಅಧಿಕಾರಿಯೊಬ್ಬರು ತಾವು ಲಂಚ ಸ್ವೀಕರಿಸುತ್ತಿದ್ದಾಗ ಆಗಮಿಸಿದ ಲೋಕಾಯುಕ್ತ ವಿಶೇಷ ಪೊಲೀಸ್‌ ಎಸ್ಟಾಬ್ಲಿಶ್ಮೆಂಟ್‌ ಅಧಿಕಾರಿಗಳನ್ನು ಕಂಡು ದಂಗಾಗಿ ಲಂಚವಾಗಿ ಪಡೆದ ರೂ. 5,000 ಹಣವನ್ನೇ ನುಂಗಿಬಿಟ್ಟ ವಿದ್ಯಮಾನ ವರದಿಯಾಗಿದೆ.

ಅಧಿಕಾರಿ ಪಟ್ವಾರಿ ಗಜೇಂದ್ರ ಸಿಂಗ್‌ ಎಂಬವರು ಸೋಮವಾರ ತಮ್ಮ ಖಾಸಗಿ ಕಚೇರಿಯಲ್ಲಿ ರೂ. 5,000 ಲಂಚ ಸ್ವೀಕರಿಸುತ್ತಿದ್ದಾಗ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಅಧಿಕಾರಿ ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆಂದು ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ಲೋಕಾಯುಕ್ತದ ಬಳಿ ದೂರಿದ್ದರು. ಲಂಚ ಸ್ವೀಕರಿಸಿದಾಕ್ಷಣ ಲೋಕಾಯುಕ್ತ ಅಧಿಕಾರಿಗಳನ್ನ ಗಮನಿಸಿದ ಸಿಂಗ್‌ ಏನು ಮಾಡಬೇಕೆಂದು ತೋಚದೆ ನೋಟುಗಳನ್ನು ನುಂಗಿ ಬಿಟ್ಟಿದ್ದರು.

ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು ಹಾಗೂ ಈಗ ಅವರು ಚೆನ್ನಾಗಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಲಾಗಿದ್ದು ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News