×
Ad

ತುಮಕೂರು ದಸರಾಗೆ ತೆರೆ | ಜಂಬೂ ಸವಾರಿ-ಸಾಂಸ್ಕೃತಿಕ ವೈಭವದ ಅದ್ಭುತ ಸಂಗಮ

Update: 2025-10-03 00:06 IST

ತುಮಕೂರು.ಅ.2: ತುಮಕೂರು ದಸರಾ ಉತ್ಸವದ ಅಂಗವಾಗಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್‌ ಗುರುವಾರ ಮಧ್ಯಾಹ್ನ ನಗರದ ಬಿಜಿಎಸ್ ವೃತ್ತದ ಬಳಿ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ ಚಾಲನೆ ನೀಡಿದ ವೈಭವಯುತ ಜಂಬೂ ಸವಾರಿ ಮೆರವಣಿಗೆಯು ಸಾಂಸ್ಕೃತಿಕ ಹಾಗೂ ಭಕ್ತಿಭಾವದ ಸಂಗಮಕ್ಕೆ ಸಾಕ್ಷಿಯಾಯಿತು.

ಜಂಬೂ ಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆ ಎಂದರೆ ಅಂಬಾರಿ ಹೊತ್ತಿದ್ದ ಶ್ರೀರಾಮ ಆನೆ. ಮೈಸೂರು ದಸರಾ ಸಂಪ್ರದಾಯವನ್ನು ನೆನಪಿಸುವಂತೆ ಶ್ರೀರಾಮನನ್ನು ಬಣ್ಣ-ಬಣ್ಣದ ವಸ್ತ್ರಹಾಗೂ ಹೂಗಳಿಂದ ಅಲಂಕರಿಸಿ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಕುಳ್ಳಿರಿಸಲಾಗಿತ್ತು. ನೂರಾರು ಕಲಾತಂಡಗಳ ಕಲಾ ವೈಭವ, ಗಜಪಡೆಯ ಸೊಬಗು ಮತ್ತು ಆಕಾಶದಿಂದ ಸುರಿದ ಪುಪ್ಪಾರ್ಚನೆ, ಇವೆಲ್ಲವೂ ಸೇರಿ ಈ ವರ್ಷದ ತುಮಕೂರು ದಸರಾ ಜಂಬೂ ಸವಾರಿ ಜನಮನದಲ್ಲಿ ಅಜರಾಮರ ನೆನಪು, ನಗರದ ಬೀದಿಗಳನ್ನು ಜೀವಂತಗೊಳಿಸಿದ ಈ ಮೆರವಣಿಗೆ ನಾಡಹಬ್ಬದ ನಿಜವಾದ ಭಾವವನ್ನು ಮೂಡಿಸಿತು.

 ಜಂಬೂ ಸವಾರಿ ಮೆರವಣಿಗೆಯು ನಗರದ ಬಿಜಿಎಸ್‌ ವೃತ್ತದಿಂದ ಚರ್ಚ್ ಸರ್ಕಲ್, ಡಿಸಿ ಕಚೇರಿ, ಅಮಾನಿಕೆರೆ ರಸ್ತೆ, ಕೋತಿ ತೋಪು, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಮಾರ್ಗವಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನು ತಲುಪಿತು. ನಂತರ ಸಚಿವ ಪರಮೇಶ್ವರ್ ಕದಳಿ ಛೇದನ ಮಾಡುವ ಮೂಲಕ ಶಮೀ ಪೂಜೆ ಸಂಪನ್ನಗೊಂಡಿತು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸುರೇಶ್ ಗೌಡ, ಟಿ.ಬಿ. ಜಯಚಂದ್ರ, ಸಚಿವರ ಧರ್ಮಪತ್ನಿ ಕನ್ನಿಕಾ ಪರಮೇಶ್ವರ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿ. ಪ್ರಭು, ಬಿ.ವಿ. ಅಶ್ವಿಜಾ, ಡಾ. ಎನ್. ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News