ತಿಪಟೂರು | ಚಿರತೆ ದಾಳಿಗೆ 8 ಕುರಿಗಳ ಬಲಿ
ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಶಿವರ ಗ್ರಾಮದಲ್ಲಿ ರಾತ್ರಿ ಕುರಿ ಗೂಡಿಗೆ ನುಗ್ಗಿದ ಚಿರತೆಯೊಂದು 8 ಕುರಿಗಳನ್ನು ಬಲಿ ಪಡೆದು, ಇನ್ನೂ 4 ಕುರಿಗಳಿಗೆ ಗಾಯ ಮಾಡಿರುವ ಘಟನೆ ನಡೆದಿದೆ.
ಶಿವರ ಗ್ರಾಮದ ರಾಜಶೇಖರ್ ಅವರಿಗೆ ಸೇರಿದ ಕುರಿ ಗೂಡಿನಲ್ಲಿ ಈ ಘಟನೆ ಸಂಭವಿಸಿದ್ದು, ಬೆಳಗ್ಗೆ ಕುರಿಗಳನ್ನು ಬಿಡಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ವಲಯ ಅರಣ್ಯಾಧಿಕಾರಿ ಮಧು ಅವರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ನಾಲ್ಕು–ಐದು ದಿನಗಳಿಂದ ಗ್ರಾಮದಲ್ಲಿ ಚಿರತೆಯ ಓಡಾಟ ಕಾಣಿಸಿಕೊಂಡಿದ್ದು, ಕ್ಷಣ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಮಧು ಅವರು, ಚಿರತೆ ಸೆರೆ ಹಿಡಿಯಲು ಬೋನ್‌ಗಳನ್ನು ಇಡಲಾಗುವುದು ಮತ್ತು ಕುರಿಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರದಿಂದ ದೊರೆಯುವ ಪರಿಹಾರವನ್ನೂ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.