×
Ad

ತುಮಕೂರು | ದನದ ಕೊಟ್ಟಿಗೆಗೆ ಬೆಂಕಿ: 25 ಮೇಕೆ, 9 ಹಸುಗಳು ಸಜೀವ ದಹನ

Update: 2024-01-14 11:19 IST

ತುಮಕೂರು, ಜ.14: ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 25 ಮೇಕೆ, 9 ಹಸುಗಳ ಸಹಿತ ಲಕ್ಷಾಂತ ರೂ. ಮೌಲ್ಯದ ಸೊತ್ತು ಬೆಂಕಿಗಾಹುತಿಯಾದ ಘಟನೆ ತುಮಕೂರು ಗ್ರಾಮಾಂತರ ಕ್ಷೇತ್ರದ ಕಾರನಹಳ್ಳಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.

ಕಾರನಹಳ್ಳಿ ಗ್ರಾಮದ ರೈತ ಚಿಕ್ಕಣ್ಣ ಎಂಬವರಿಗೆ ಸೇರಿದ ಕೊಟ್ಟಿಗೆಗೆ ಇಂದು ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಇದರಿಂದ ಕೊಟ್ಟಿಗೆಯಲ್ಲಿದ್ದ 25 ಮೇಕೆ, 9 ಹಸುಗಳು ಸಜೀವ ದಹನಗೊಂಡಿವೆ. ಇದಲ್ಲದೆ ಟ್ರ್ಯಾಕ್ಟರ್, ಬೈಕ್, 10 ಕ್ವಿಂಟಾಲ್ ಅಡಿಕೆ, 600 ತೆಂಗು, ಮೋಟರ್ ಪಂಪ್ ಸೆಟ್ ಕೇಬಲ್, ರಾಗಿ ಕುಯ್ಯುವ ಯಂತ್ರ ಸೇರಿದಂತೆ ಹಲವು ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ಚಿಕ್ಕಣ್ಣ ತಿಳಿಸಿದ್ದಾರೆ. ಇದರಿಂದ ಸುಮಾರು 30 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News