×
Ad

ತಿಪಟೂರು ನಗರಸಭೆ ಕಾಂಗ್ರೆಸ್ ತೆಕ್ಕೆಗೆ

Update: 2024-08-26 23:21 IST

ತಿಪಟೂರು: ತಿಪಟೂರು ನಗರಸಭೆ ಆಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ನಡೆದ ಚುನಾವಣೆಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯಾರ್ಥಿ ಯಮುನಾ ಧರಣೀಶ್‌ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಸದಸ್ಯರಾದ ಮೇಘನಾ ಭೂಷಣ್ ಆಯ್ಕೆಯಾಗುವ ಮೂಲಕ ಬಿಜೆಪಿ ಭದ್ರಕೋಟೆಯಾಗಿದ್ದ ತಿಪಟೂರು ನಗರಸಭೆಗೆ ಕಾಂಗ್ರೆಸ್ ಲಗ್ಗೆಯಿಟ್ಟಿದೆ .

ಒಟ್ಟು 31 ನಗರಸಭಾ ಸ್ಥಾನಗಳು,  ಶಾಸಕರು ಹಾಗೂ ಸಂಸದರು ಸೇರಿ ಒಟ್ಟು 33 ಮತಗಳ ಪೈಕಿ ಯಮುನಾ ಧರಣೀಶ್ 18 ಮತಗಳನ್ನ ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಪ್ರತಿಸ್ಪರ್ಥಿ ಬಿಜೆಪಿ ಬೆಂಬಲಿತ ಅಭ್ಯಾರ್ಥಿ ಲತಾ ಲೋಕೇಶ್ 15 ಮತಪಡೆದು ಪರಾಭವಗೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೇಘನಾ ಭೂಷಣ್ 18 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಸಂಗಮೇಶ್ 15 ಮತ ಪಡೆದು ಪರಾಭವಗೊಂಡರು

ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದು ನಗರಸಭೆ ಆಡಳಿತ ಕಾಂಗ್ರೆಸ್ ಕೈವಶವಾಗಲು ಕಾರಣ.

ನೂತನ ಅಧ್ಯಕ್ಷರನ್ನ ಶಾಸಕ ಕೆ.ಷಡಕ್ಷರಿ ಅಭಿನಂದಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಪಠಾಕಿ ಸಿಡಿಸಿ ಸಿಹಿ ವಿತರಣೆ ಮಡಿ ವಿಜಯೋತ್ಸವ ಆಚರಿಸಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News