×
Ad

ಉಡುಪಿ: ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿದ್ಯಾರ್ಥಿವೇತನ ವಿತರಣೆ

Update: 2023-06-20 15:38 IST

ಉಡುಪಿ, ಜೂ.20: ದಲಿತ ಐಕ್ಯತಾ ಹೋರಾಟ ಸಮಿತಿಯು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೈರಂಪಳ್ಳಿ ಗ್ರಾಮ ಶಾಖೆಯ ಸಹಯೋಗದೊಂದಿಗೆ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಇತ್ತೀಚೆಗೆ ಪೆರ್ಡೂರು ಸಮೀಪದ ಬೈರಂಪಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಉಡುಪಿ ಜಿಲ್ಲಾ ದಲಿತ ಐಕ್ಯತಾ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ರಾದ ಸುಂದರ ಮಾಸ್ತರ್, ಶ್ಯಾಮರಾಜ್ ಬಿರ್ತಿ ಮತ್ತು ಪರಮೇಶ್ವರ್ ಉಪ್ಪೂರು ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿದರು.

ಬಳಿಕ ಮಾತನಾಡಿದ ಸುಂದರ ಮಾಸ್ತರ್, ಭೇಟಿ ಪಡಾವೋ ಭೇಟಿ ಬಚಾವೋ ಎಂದು ಈ ದೇಶದ ಪ್ರಧಾನಿ ನರೇಂದ್ರ ಮೋದಿ ಬೊಗಳೆ ಬಿಡುತ್ತಿ ದ್ದಾರೆ. ನಮ್ಮ ದೇಶಕ್ಕಾಗಿ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದು ತಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗಲೂ ಮೋದಿ ತುಟಿ ಬಿಚ್ಚದೆ ವಿದೇಶ ಪ್ರಯಾಣ ಮಾಡುತ್ತಿರುವುದು ನಮ್ಮ ಧೌರ್ಬಾಗ್ಯ ಎಂದು ಆರೋಪಿಸಿದರು.

ಯಾರೋ ನಮ್ಮ ರಕ್ಷಣೆ ಉದ್ದಾರ ಮಾಡುತ್ತಾರೆ ಎಂಬ ಭ್ರಮೆ ನಮಗೆ ಬೇಡ. ನಮ್ಮ ಉದ್ಧಾರ ಕೇವಲ ಶಿಕ್ಷಣದಿಂದ ಮಾತ್ರವೇ ಸಾಧ್ಯ. ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ಸುಮಾರು ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿವೇತನವನ್ನು ವಿವಿಧ ಗ್ರಾಮಗಳ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬೈರಂಪಳ್ಳಿ ಗ್ರಾಮ ಶಾಖೆಯ ಸಂಚಾಲಕ ಗುಣಕರ ಬೈರಂಪಳ್ಳಿ, ಸಂಘಟನಾ ಸಂಚಾಲಕರಾದ ಸುಖೇಶ ಬೈರಂಪಳ್ಳಿ, ಮುಖಂಡರಾದ ಶಿವರಾಮ ಬೈರಂಪಳ್ಳಿ, ಮುದ್ದು ಕಡ್ತಲ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News