ಅಂದರ್ ಬಾಹರ್: ಆರು ಮಂದಿ ವಶಕ್ಕೆ
Update: 2025-08-12 20:39 IST
ಹೆಬ್ರಿ, ಆ.12: ವರಂಗ ಗ್ರಾಮದ ಮುನಿಯಾಲುಬೈಲು ಎಂಬಲ್ಲಿನ ಹಾಡಿಯಲ್ಲಿ ಆ.10ರಂದು ಅಂದರ್‌ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಹೆಬ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಉದಯ ನಾಯ್ಕ, ಶಿವರಾಮ ಶೆಟ್ಟಿ, ಕಿರಣ ನಾಯ್ಕ, ಆನಂದ, ಅಶೋಕ, ಸುರೇಶ ನಾಯ್ಕ ಎಂದು ಗುರುತಿಸಲಾಗಿದೆ. ಇವರಿಂದ 3,390ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.