×
Ad

ಕರ್ನಾಟಕ ಚುನಾವಣಾ ಆಯೋಗ ನೋಟೀಸ್

Update: 2025-08-19 20:29 IST

ಉಡುಪಿ, ಆ.19: ರೆಪ್ರೆಸೆಂಟೇಶನ್ ಆಫ್ ದಿ ಪೀಪಲ್ ಆಕ್ಟ್ 1991ರ ಸೆಕ್ಷನ್ 29ಎ ಅಡಿಯಲ್ಲಿ ಯಾವುದೇ ಸಂಘ ಅಥವಾ ಭಾರತೀಯ ನಾಗರಿಕರು ವೈಯಕ್ತಿಕ ರಾಜಕೀಯ ಪಕ್ಷವಾಗಿ ನೋಂದಣಿಗೆ ಅವಕಾಶವಿದ್ದು, ಭಾರತೀಯ ಜನಶಕ್ತಿ ಕಾಂಗ್ರೇಸ್ ರಾಜಕೀಯ ಪಕ್ಷವಾಗಿ ಅರ್ಜಿ ಸಲ್ಲಿಸಿತ್ತು. ಈ ಪಕ್ಷವು 2019ರ ಅಂದರೆ ಕಳೆದ ಆರು ವರ್ಷಗಳಿಂದ ಪಕ್ಷದ ಅಭ್ಯರ್ಥಿಯಾಗಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಅಥವಾ ಅವುಗಳ ಉಪ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದು ಚುನಾವಣೆ ದಾಖಲೆಯಲ್ಲಿ ಕಂಡುಬಂದಿದೆ.

ಈ ಪಕ್ಷವು ರಾಜಕೀಯ ಚಟುವಟಿಕೆ ಕಾರ್ಯನಿರ್ವಹಿಸದೇ ಇರುವ ಹಿನ್ನೆಲೆಯಲ್ಲಿ, ಕರ್ನಾಟಕ ಚುನಾವಣಾ ಆಯೋಗವು ಭಾರತದ ಸಂವಿಧಾನದ 324ನೇ ವಿಧಿ ಹಾಗೂ ರೆಪ್ರೆಸೆಂಟೇಟಿವ್ ಆಫ್ ಪೀಪಲ್ ಆಕ್ಟ್ 1991ರ ಸೆಕ್ಷನ್ 29ಎ ಅಡಿಯಲ್ಲಿ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ನೋಂದಾಯಿತ ಪಕ್ಷಗಳ ಪಟ್ಟಿಯಿಂದ ಕೈಬಿಡಲು ಪ್ರಸ್ತಾಪಿಸಿ, ನೋಟೀಸ್ ನೀಡಿದೆ.

ಈ ಪಕ್ಷದ ಅಧ್ಯಕ್ಷರು ಅಥವಾ ಕಾರ್ಯದರ್ಶಿ ಪೂರಕ ದಾಖಲೆಗಳೊಂದಿಗೆ ಪ್ರಮಾಣ ಪತ್ರವನ್ನು 2025 ಸೆಪ್ಟಂಬರ್ 1ರ ಒಳಗೆ ಸಲ್ಲಿಸಲು ಅವಕಾಶ ನೀಡಿ, ಆ ದಿನದಂದು ಪಕ್ಷದ ವಿಚಾರಣೆ ನಿಗದಿಪಡಿಸಿ, ಚುನಾವಣಾ ಆಯೋಗ ನೋಟೀಸ್ ನೀಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News