×
Ad

ಆಸ್ಟ್ರೋಮೋಹನ್‌ಗೆ ಅಮೆರಿಕದ ಐಸಿಎಸ್ ಗೌರವ ಫೆಲೋಶಿಪ್

Update: 2025-08-19 20:38 IST

ಉಡುಪಿ, ಆ.19: ವಿಶ್ವ ಛಾಯಾಗ್ರಹಣ ದಿನದಂದು, ಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಅಮೆರಿಕದ ಇಮೇಜ್ ಕಾಲಿಗ್ ಸೊಸೈಟಿ ಇಂಟರ್ನ್ಯಾಷನಲ್ (ಐಸಿಎಸ್)ನ ಹಾನರರಿ ಫೆಲೋಶಿಪ್‌ನ್ನು ಪ್ರದಾನ ಮಾಡಲಾಗಿದೆ.

ಇದು ಛಾಯಾಗ್ರಾಹಕರಿಗೆ ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ. ಛಾಯಾಗ್ರಹಣ ಕಲೆ ಹಾಗೂ ಸಂಸ್ಕೃತಿಯ ಅಭಿವೃದ್ದಿಗೆ, ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಆಸ್ಟ್ರೋ ಮೋಹನ್ ನೀಡಿದ ಅಮೂಲ್ಯ ಕೊಡುಗೆ ಗಳನ್ನು ಗೌರವಿಸಿ ಇದನ್ನು ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

1994ರಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಆಸ್ಟ್ರೋ ಮೋಹನ್, ತಮ್ಮ ವಿಶಿಷ್ಟ ಪ್ರಯೋಗಶೀಲತೆ ಮತ್ತು ನವೀನ ದೃಷ್ಟಿಕೋನದಿಂದ ನಾಡಿನ ಸೆಳೆದಿದ್ದಾರೆ. ಈವರೆಗೆ 850ಕ್ಕೂ ಅಧಿಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News