×
Ad

ಉಡುಪಿ ನಗರಸಭೆಯ ಇ-ಆಫೀಸ್ ವ್ಯವಸ್ಥೆ ಉದ್ಘಾಟನೆ

Update: 2025-08-22 20:43 IST

ಉಡುಪಿ, ಆ.22: ಉಡುಪಿ ನಗರಸಭೆ ವತಿಯಿಂದ ನೂತನವಾಗಿ ಅಳವಡಿಸಿದ ಇ-ಆಫೀಸ್ ವ್ಯವಸ್ಥೆಯನ್ನು ನಗರಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಈಗಾಗಲೇ ಹೆಚ್ಚಿನ ಎಲ್ಲಾ ಇಲಾಖಾ ಕಚೇರಿಗಳಲ್ಲಿ ಇ -ಆಫೀಸ್ ಕೇಂದ್ರವನ್ನು ತೆರೆಯಲಾಗಿದೆ. ಈ ನಿಟ್ಟಿನಲ್ಲಿ ಉಡುಪಿ ನಗರಸಭೆಯು ಇ-ಆಫೀಸ್ ತಂತ್ರಾಂಶ ಅಳವಡಿಕೆ ಮಾಡಲಾಗಿದ್ದು, ಇದರಿಂದ ಯಾವುದೇ ಕಡತವು ಸಂಪೂರ್ಣವಾಗಿ ಪೇಪರ್ ಮುಕ್ತವಾಗಿ ಕಾರ್ಯನಿರ್ವಹಿಸಬಹುದಾಗಿದೆ. ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಮೊಬೈಲ್ ನಂಬರ್ ಜೊತೆಗೆ ಇಮೈಲ್ ಐಡಿ ಕಡ್ಡಾಯ ವಾಗಿ ನಮೂದಿಸಬೇಕು. ಇದರಿಂದ ಕಡತಸಂಖ್ಯೆ ನಿರ್ವಹಣೆ ಸುಲಭ ವಾಗುತ್ತದೆ. ಈ ನೂತನ ಸೌಲಭ್ಯವನ್ನು ಇಂದಿನಿಂದಲೇ ಉಪಯೋಗಿಸಿ ಕೊಳ್ಳುವಂತೆ ಕರೆನೀಡಿದರು

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯೀ ಸಮಿತಿಯ ಅಧ್ಯಕ್ಷ ಸುಂದರ್ ಕಲ್ಮಾಡಿ, ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ, ನಗರಸಭಾ ಸದಸ್ಯರಾದ ಟಿ.ಜಿ.ಹೆಗ್ಡೆ, ಬಾಲಕೃಷ್ಣ ಶೆಟ್ಟಿ, ರಶ್ಮಿ ಸಿ.ಭಟ್, ಸವಿತಾ ಹರೀಶ್‌ರಾಮ್, ಮಂಜುನಾಥ್ ಮಣಿಪಾಲ್, ಅಧಿಕಾರಿಗಳಾದ ರಾಜೇಶ್, ಸುಧಾಕರ್ ಮೊದಲಾದವರು ಉಪಸ್ಥರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News