‘ಛಾಯಾ ನಿದರ್ಶನ’ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ
ಉಡುಪಿ, ಆ.22: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ವತಿಯಿಂದ ಛಾಯಾ ನಿದರ್ಶನ ವಿಷಯದ ಕುರಿತು ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ ಆ.21ರಂದು ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಎಸ್‌ಡಿಎಂ ಆಯುರ್ವೇದ ಮಹಾ ವಿದ್ಯಾ ಲಯದ ಎಮೆರಿಟಸ್ ಪ್ರೊ. ಡಾ.ಮುರಳಿಧರ ಶರ್ಮಾ, ಚೆಸ್ಟ್ ಟು ಗಟ್-ಎ ಪ್ರಾಕ್ಟಿಕಲ್ ಎಕ್ಸ್-ರೇ ಅಪ್ರೋಚ್’ ಬಗ್ಗೆ ವಿವರಿಸಿದರು. ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲ ಡಾ.ನಿರಂಜನ್ ರಾವ್ ವಹಿಸಿದ್ದರು.
ಕಾಲೇಜು ಪ್ರಾಂಶುಪಾಲ ಡಾ.ಮಮತಾ ಕೆ.ವಿ. ಮತ್ತು ರೋಗನಿದಾನ ವಿಭಾಗದ ಮುಖ್ಯಸ್ಥ ಡಾ.ನಾಗರಾಜ್ ಎಸ್., ಪಿ.ಜಿ.ಡೀನ್ ಡಾ.ಶ್ರೀಕಾಂತ್ ಪಿ. ಮತ್ತು ರೋಗನಿದಾನ ವಿಭಾಗದ ಪ್ರಾಧ್ಯಾಪಕ ಡಾ.ಪ್ರಸನ್ನ ಎನ್.ಮೊಗಸಾಲೆ ಉಪಸ್ಥಿತರಿದ್ದರು. ಬೆಳಗಾವಿ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಹೇಮಲತಾ ಎಸ್.ಶೇಟ್ ‘ಸ್ಪೈನ್ ಟು ಸೈನೋವಿಯಂ’ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಮಣಿಪಾಲ್ ಹೆಲ್ತ್ ಮ್ಯಾಪ್‌ನ ತಾಂತ್ರಿಕ ಮತ್ತು ವೈದ್ಯಕೀಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ.ಪ್ರವೀಣ್ ಶಾಸ್ತ್ರಿ, ಸಿಟಿ ಬ್ರೈನ್ ಫ್ರಮ್ ಬ್ಲೀಡ್ ಟು ಬ್ಲಾಕ್ಸ್’ ಕುರಿತು ತುರ್ತು ಸ್ಥಿತಿಗಳಲ್ಲಿ ಸಿ.ಟಿ.ಬ್ರೈನ್‌ನ ವೀಕ್ಷಣೆ ಹೇಗೆ ಮಾಡಬೇಕು ಎಂಬುದನ್ನು ವಿವರಿಸಿದರು.
ಡಾ.ಅರುಣ್ ಕುಮಾರ್ ಎಮ್ ಸ್ವಾಗತಿಸಿದರು. ಡಾ.ಸರಿತಾ ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸದಾನಂದ ಭಟ್ ವಂದಿಸಿದರು. ಹಿರಿಯ ಸಂಶೋಧನಾ ಅಧಿಕಾರಿ ನವೀನ್ ಚಂದ್ರ ಉಪಸ್ಥಿತರಿದ್ದರು. 100ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು.