ಸಾಲದ ಚಿಂತೆಯಲ್ಲಿ ವ್ಯಕ್ತಿ ಆತ್ಮಹತ್ಯೆ
Update: 2025-08-23 22:02 IST
ಶಿರ್ವ, ಆ.23: ಸಾಲದ ಚಿಂತೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.22ರಂದು ಬೆಳಗ್ಗೆ ಶಿರ್ವ ಗ್ರಾಮದ ಕೊರಗರಪಾದೆ ಬಳಿ ನಡೆದಿದೆ.
ಮೃತರನ್ನು ಮಟ್ಟಾರು ಮಾಣಿಬೆಟ್ಟು ನಿವಾಸಿ ಸಂತೋಷ(43) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಲ್ಲಿ ಟೆಂಪೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಇವರು ವಾಹನದ ಬಗ್ಗೆ ಸಾಲ ಮಾಡಿಕೊಂಡಿದ್ದರು. ಸಾಲದ ವಸೂಲಾತಿಗಾಗಿ ಫೈನಾನ್ಸ್‌ರವರು ಮನೆಗೆ ಬಂದು ವಿಚಾರಿಸಿದ ಚಿಂತೆಯಲ್ಲಿ ಇವರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.