×
Ad

ʼಬೇರೆ ಧರ್ಮದʼ ಮಹಿಳೆಯಿಂದ ದಸರಾ ಉದ್ಘಾಟನೆಗೆ ಶಾಸಕ ಯಶ್‌ಪಾಲ್ ಸುವರ್ಣ ಆಕ್ಷೇಪ

Update: 2025-08-24 21:44 IST

ಯಶ್‌ಪಾಲ್ ಸುವರ್ಣ 

ಉಡುಪಿ, ಆ.24: ಮೈಸೂರು ಚಾಮುಂಡೇಶ್ವರಿ ಮಾತೆಯ ದಸರಾ ಮಹೋತ್ಸವವನ್ನು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಒಪ್ಪದ ʼಬೇರೆ ಧರ್ಮದʼ ಮಹಿಳೆಯ ಮೂಲಕ ಉದ್ಘಾಟನೆ ನಡೆಸಲು ಮುಂದಾದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆರೋಪಿಸಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ನಡೆಸಿ ಷಡ್ಯಂತ್ರ ರೂಪಿಸಿದ ಹಿಂದೂ ವಿರೋಧಿ ಶಕ್ತಿಗಳಿಗೆ ಮಣಿದು ರಾಜ್ಯ ಸರಕಾರ ಈ ನಿರ್ಧಾರ ಮಾಡಿದಂತಿದೆ. ಮೈಸೂರು ಒಡೆಯರ ಸಂಸ್ಥಾನದ ಆಳ್ವಿಕೆಯ ಕಾಲದಿಂದ ನಡೆಯುತ್ತಿರುವ ಮೈಸೂರು ಚಾಮುಂಡೇಶ್ವರಿಯ ದಸರಾ ಮಹೋತ್ಸವ ವಿಚಾರದಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ನಿರ್ಧಾರವನ್ನು ರಾಜ್ಯ ಸರಕಾರ ಪುನರ್ ಪರಿಶೀಲನೆ ಮಾಡಿ ದೇವಸ್ಥಾನದ ಪಾವಿತ್ರ್ಯತೆಗೆ ಪೂರಕ ವಾಗಿ ಯೋಗ್ಯ ವ್ಯಕ್ತಿಯಿಂದ ದಸರಾ ಉದ್ಘಾಟನೆ ಮಾಡಬೇಕು ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News