×
Ad

ಕೆಲಸದ ಸ್ಥಳದಲ್ಲಿ ಆಂತರಿಕ ದೂರು ಸಮಿತಿ ರಚನೆ ಕಡ್ಡಾಯ

Update: 2025-08-25 21:17 IST

ಉಡುಪಿ, ಆ.25: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ ಮತ್ತು ನಿವಾರಿಸುವಿಕೆ) ಕಾಯ್ದೆ 2013ರ ಅನುಷ್ಠಾನಕ್ಕಾಗಿ ಸರ್ವೋಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನಗಳಂತೆ ಕಾಯ್ದೆ ಅನ್ವಯಿಸುವ 10 ಮತ್ತು 10ಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಪ್ರತಿ ಸಂಸ್ಥೆಯ ಮಾಲಕರು ತಮ್ಮ ಸಂಸ್ಥೆಯಲ್ಲಿ ಆಂತರಿಕ ದೂರು ಸಮಿತಿಯನ್ನು ರಚಿಸುವುದು ಕಡ್ಡಾಯವಾಗಿರುತ್ತದೆ.

ಜಿಲ್ಲೆಯಲ್ಲಿ ಹಲವು ಸಂಸ್ಥೆಗಳು ಇದುವರೆಗೂ ಆಂತರಿಕ ಸಮಿತಿಯನ್ನು ರಚಿಸದೇ ಮತ್ತು ರಚಿಸಿರುವ ಬಗ್ಗೆ ಮಾಹಿತಿ ನೀಡದಿರುವುದು ಕಂಡು ಬಂದಿದ್ದು, ಸರ್ವೋಚ್ಛ ನ್ಯಾಯಾಲಯವು ನೀಡಿರುವ ನಿರ್ದೇಶನದಂತೆ, ಆಂತರಿಕ ಸಮಿತಿ ಯನ್ನು ರಚಿಸದ ಎಲ್ಲಾ ಸಂಸ್ಥೆಗಳು ಈ ಕೂಡಲೇ ಅಂತರಿಕ ದೂರು ಸಮಿತಿಯನ್ನು ರಚನೆ ಮಾಡಿ, ಸಮಿತಿ ರಚಿಸಿದ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಕೂಡಲೇ ಸಲ್ಲಿಸಬೇಕು. ಅದರ ಪ್ರತಿಯನ್ನು ಕಾರ್ಮಿಕ ಅಧಿಕಾರಿ ಗಳ ಕಛೇರಿ, ಉಡುಪಿ ಉಪ ವಿಭಾಗ, ರಜತಾದ್ರಿ, 1 ನೇ ಮಹಡಿ, ನಂ ಎ-201, ಮಣಿಪಾಲ್, ಉಡುಪಿ ಜಿಲ್ಲೆ ಇಲ್ಲಿಗೂ ಸಲ್ಲಿಸುವಂತೆ ಉಡುಪಿ ಉಪ ವಿಭಾಗದ ಕಾರ್ಮಿಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News