×
Ad

ಹಿರಿಯಡ್ಕ ಸರಕಾರಿ ಕಾಲೇಜಿನ ಸ್ಪರ್ಧಾಕೋಶಕ್ಕೆ ದೇಣಿಗೆ

Update: 2025-08-30 18:42 IST

ಉಡುಪಿ: ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜು ತನ್ನ ಹೊಸ ಆ್ಯಡ್- ಓನ್ ಕೋರ್ಸ್‌ಗಳಿಗಾಗಿ ಆರಂಭಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿಯ ಸ್ಪರ್ಧಾಕೋಶ ಪುಸ್ತಕ ಸಂಗ್ರಹಕ್ಕೆ ಪುಸ್ತಕಗಳ ಖರೀದಿಗೆ ದೇಣಿಗೆಯಾಗಿ ನೀಡಲಾಯಿತು.

ಹಿರಿಯಡಕದ ರೈತರ ಸಹಕಾರಿ ಸಂಘದ ಅಧ್ಯಕ್ಷ ಬಿ.ಅಶೋಕ್ ಕುಮಾರ್ ಶೆಟ್ಟಿ ಆ.29ರಂದು ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಅವರಿಗೆ 50,000ರೂ. ಮೌಲ್ಯದ ಚೆಕ್ ಹಸ್ತಾಂತರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಚೆನ್ನಿಬೆಟ್ಟು ವಸಂತ ಶೆಟ್ಟಿ, ಸುಂದರ್ ಕಾಂಚನ್, ಬ್ಯಾಂಕ್ ಉಪಾಧ್ಯಕ್ಷ ಸುಂದರ ಪೂಜಾರಿ, ನಿರ್ದೇಶಕರುಗಳಾದ ರವೀಂದ್ರ ನಾಥ್ ಹೆಗ್ಡೆ, ಭಾಸ್ಕರ ಪೂಜಾರಿ, ಕಿರಣ್ ಹೆಗ್ಡೆ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಮತ್ತು ಉಪಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿತ್ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ.ಸೌಮ್ಯಲತಾ ಪಿ. ಸ್ವಾಗತಿಸಿದರು. ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ ವಂದಿಸಿದರು. ನಂದೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News