ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಕುಂದಾಪುರದಲ್ಲಿ ಪೋಸ್ಟ್ ಕಾರ್ಡ್ ಚಳವಳಿ
ಕುಂದಾಪುರ, ಸೆ.18: ಕರ್ನಾಟಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಯನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸ ಬೇಕೆಂದು ಒತ್ತಾಯಿಸಿ ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ ಸಿಐಟಿಯು ವತಿ ಯಿಂದ ಮುಖ್ಯಮಂತ್ರಿಯವರಿಗೆ ಸಾಮೂಹಿಕವಾಗಿ ಪೋಸ್ಟ್ ಕಾರ್ಡ್‌ನ್ನು ಅಂಚೆಡಬ್ಬದೊಳಗೆ ಹಾಕುವ ಮೂಲಕ ಅಂಚೆ ಚಳವಳಿಯನ್ನು ನಡೆಸಲಾಯಿತು.
ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಇರುವ ಪೋಸ್ಟ್ ಆಫೀಸ್‌ನಲ್ಲಿ ಕಾರ್ಡ್ ಪೋಸ್ಟ್ ಮಾಡಿ ನಡೆದ ಆಟೋಚಾಲಕರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ವಿ ರಾಜ್ಯದಾದ್ಯಂತ ಇರುವ 8 ಲಕ್ಷ ಆಟೋ ಚಾಲಕರ ಹಾಗೂ ಅವರ ಕುಟುಂಬಕ್ಕೆ ಬೈಕ್ ಟ್ಯಾಕ್ಸಿ ಮಾರಕವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ಸ್ವಾಗತಿಸಿ, ಅಧ್ಯಕ್ಷರಾದ ರಮೇಶ್ ಅವರು ವಿ ಪ್ರಸ್ತಾವನೆ ಮಾತಾಡಿದರು. ಸಿಐಟಿಯು ಮುಖಂಡರಾದ ಎಚ್. ನರಸಿಂಹ, ಸಂಘದ ಗೌರವ ಅಧ್ಯಕ್ಷ ಕರುಣಾಕರ, ಮುಖಂಡರಾದ ಮಲ್ಲಿಕಾರ್ಜುನ, ಶೇಖರ್ ಪೂಜಾರಿ, ಕೃಷ್ಣ, ನರಸಿಂಹ, ಕೇಶವ, ಗೋವಿಂದ ಗುಡಾರಹಕ್ಲು, ರವಿ ವಿ.ಎಂ, ಸಂತೋಷ್ ಕಲ್ಲಾಗರ ಉಪಸ್ಥಿತರಿದ್ದರು.