ಅರಣ್ಯ ಇಲಾಖೆಯ ಅಧೀಕ್ಷಕ ಹರಿಪ್ರಸಾದ್ ನಿಧನ
Update: 2025-09-19 18:08 IST
ಕಾರ್ಕಳ, ಸೆ.19: ಅರಣ್ಯ ಇಲಾಖೆ ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಕೇಂದ್ರ ಕಚೇರಿಯ ಅಧೀಕ್ಷಕ ಹರಿಪ್ರಸಾದ್(58) ಅನಾರೋಗ್ಯದಿಂದ ಸೆ.19 ರಂದು ಬೆಳಗ್ಗೆ ನಿಧನರಾದರು.
ಅರಣ್ಯ ಇಲಾಖೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಇವರು, ವಿವಿಧ ಹುದ್ದೆಗಳನ್ನು ನಿಬಾಯಿಸಿ ಅಧೀಕ್ಷಕ ಹುದ್ದೆಗೆ ಪದೋನ್ನತಿ ಹೊಂದಿದ್ದರು. ಮೂಲತ: ವೇಣೂರಿನವರಾಗಿದ್ದ ಇವರು ಕಾರ್ಕಳದ ಕಂಬಳಬೆಟ್ಟುವಿನಲ್ಲಿ ವಾಸವಾಗಿ ದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.