×
Ad

ಕಾಪು ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ

Update: 2025-09-20 19:53 IST

ಕಾಪು, ಸೆ.20: ಉಡುಪಿ ಜಿಲ್ಲಾಡಳಿತ, ಕಾಪು ಪುರಸಭೆ, ಸ್ವಚ್ಚಂ ವಾಟರ್ ಅಡ್ವೆಂಚರ್, ಮಣಿಪಾಲ ಎಂಐಟಿ, ಎನ್‌ಎಸ್‌ಎಸ್ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಸಾಗರ ಸುರಕ್ಷಿತ ಸಾಗರ ಯೋಜನೆಯಡಿಯಲ್ಲಿ ಬೀಚ್ ಸ್ವಚ್ಚತಾ ಕಾರ್ಯಕ್ರಮವು ಕಾಪು ಬೀಚ್‌ನಲ್ಲಿ ನಡೆಯಿತು.

ಬೀಚ್ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಬೀಚ್‌ನ ಸುತ್ತಮುತ್ತ ಪ್ರವಾಸಿಗರು ಹಾಕಿದ ಪ್ಲಾಸ್ಟಿಕ್ ವಸ್ತುಗಳು, ಬಾಟ್ಲಿಗಳು ಇತರ ವಸ್ತುಗಳನ್ನು ಸಂಗ್ರಹಿಸಿ ಪುರಸಭೆ ವಾಹನಗಳಿಗೆ ತುಂಬಿಸಿದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಬೀಚ್ ಸ್ವಚ್ಚತಾ ಕರ್ಮಚಾರಿಗಳು ಹಾಗೂ ಪುರಸಭೆ ಸ್ವಚ್ಚತಾ ಸಿಬಂದಿಗಳನ್ನು ಸನ್ಮಾನಿಸ ಲಾಯಿತು.

ಕಾಪು ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿ ಅಮೃತಾ, ಸ್ವಚ್ಚಂ ಅಡ್ವಂಚರ್ ಸಂಸ್ಥೆಯ ತಾರನಾಥ ಪೂಜಾರಿ, ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷೆ ಸರಿತಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಪುರಸಭಾ ಸದಸ್ಯರಾದ ನಿತಿನ್ ಕುಮಾರ್, ಮೋಹಿಣಿ ಶೆಟ್ಟಿ, ಶೈಲೇಶ್, ಪ್ರಾಧ್ಯಾಪಕ ನಯಾಶ್ ಶೆಟ್ಟಿ ಉಪಸ್ಥಿತರಿದ್ದರು. ದಿವಾಕರ್ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News