ದೇವಸ್ಥಾನದ ಉತ್ಸವ ಮೂರ್ತಿ ಕಳವು: ಪ್ರಕರಣ ದಾಖಲು
Update: 2025-09-20 21:02 IST
ಬೈಂದೂರು, ಸೆ.20: ಗೋಳಿಹೊಳೆ ಗ್ರಾಮದ ಶ್ರೀಯಕ್ಷೇಶ್ವರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಉತ್ಸವ ಮೂರ್ತಿಯನ್ನು ಕಳವು ಮಾಡಿರುವ ಘಟನೆ ಸೆ.18ರಂದು ರಾತ್ರಿ ವೇಳೆ ನಡೆದಿದೆ.
ಗೋಳಿಹೊಳೆ ಗ್ರಾಮದ ಶಿವರಾಜ್ ಎಂಬವರ ಹಳೆ ಮನೆಯ ಅಂಗಳದಲ್ಲಿದ್ದ ಶ್ರೀಯಕ್ಷೇಶ್ವರಿ ದೇವಸ್ಥಾನದ ಬಾಗಿಲಿನ ಚಿಲಕ ತೆಗೆದು ಒಳನುಗ್ಗಿದ ಕಳ್ಳರು, ಗರ್ಭಗುಡಿಯಲ್ಲಿ ಇಟ್ಟಿದ್ದ 1 ಕೆಜಿ. ತೂಕದ ಬೆಳ್ಳಿಯ ಉತ್ಸವ ಮೂರ್ತಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.