ಬಡ ಮುಸ್ಲಿಂ ಮಕ್ಕಳ ಮುಂಜಿ (ಸುನ್ನತ್) ಕಾರ್ಯಕ್ರಮ
Update: 2025-09-23 20:07 IST
ಉಡುಪಿ, ಸೆ.23: ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಉಡುಪಿ ಮತ್ತು ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಸಮಿತಿಯ ವತಿಯಿಂದ ಬಡ ಮುಸ್ಲಿಂ ಮಕ್ಕಳ ಮುಂಜಿ (ಸುನ್ನತ್) ಮಾಡಿಸುವ ಕಾರ್ಯಕ್ರಮ ಸೋಮವಾರ ಹೂಡೆಯ ಬೀಚ್ ಹೀಲಿಂಗ್ ಸೆಂಟರ್‌ನಲ್ಲಿ ನಡೆಯಿತು
ಕಾರ್ಯಕ್ರಮವನ್ನು ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ಉದ್ಘಾಟಿಸಿದರು. ಬೀಚ್ ಹೀಲಿಂಗ್ ಸೆಂಟರ್‌ನ ವೈದ್ಯ ಡಾ.ಮೊಹಮ್ಮದ್ ರಫೀಕ್ ಸುನ್ನತ್ ಪ್ರಾಮುಖ್ಯತತೆ ಹಾಗೂ ಇಸ್ಲಾಂನಲ್ಲಿ ಮತ್ತು ವೈಜ್ಞಾನಿಕ ವಾಗಿ ಅಗತ್ಯತೆ ಬಗ್ಗೆ ವಿವರಿಸಿದರು.
ಕಮ್ಯೂನಿಟಿ ಸೆಂಟರ್‌ನ ಪ್ರದಾನ ಕಾರ್ಯದರ್ಶಿ ಝಫ್ರುಲ್ಲಾ ಟಿ.ಎಂ., ಒಕ್ಕೂಟದ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಫಾಝಿಲ್ ಆದಿಉಡುಪಿ ಮತ್ತು ಇಮ್ತಿಯಾಜ್ ಉದ್ಯಾವರ ಉಪಸ್ಥಿತರಿದ್ದರು. ಉಡುಪಿ ತಾಲೂಕು ಅಧ್ಯಕ್ಷ ನಝೀರ್ ನೇಜಾರು ಕಿರಾತ್ ಪಠಿಸಿದರು. ತಾಲೂಕು ಕಾರ್ಯದರ್ಶಿ ಸಾದಿಕ್ ಉಸ್ತಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.