ಹೆಬ್ರಿಯಲ್ಲಿ ಶ್ರೀಧನ್ವಂತರಿ ಜಯಂತಿ ಆಚರಣೆ
ಹೆಬ್ರಿ, ಅ.19: ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿ ಮತ್ತು ಆರೋಗ್ಯ ಭಾರತಿ ಹೆಬ್ರಿ ತಾಲೂಕು ಸಮಿತಿ ಸಹಭಾಗಿತ್ವದಲ್ಲಿ ಶ್ರೀಧನ್ವಂತರಿ ಜಯಂತಿಯನ್ನು ರವಿವಾರ ಹೆಬ್ರಿಯ ಶ್ರೀರಾಮಮಂದಿರದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಮತ್ತು ಲೇಖಕ ಡಾ.ಸತ್ಯನಾರಾಯಣ ಭಟ್, ಆರೋಗ್ಯ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಡಾ.ದಿನೇಶ್ ನಾಯಕ್, ಜಿಲ್ಲಾ ಕಾರ್ಯದರ್ಶಿ ಪ್ರಭಾಕರ ಭಟ್, ಸಹ ಕಾರ್ಯದರ್ಶಿ ಕೃಷ್ಣರಾಜ ಸಾಮಗ, ಜಿಲ್ಲಾ ಸಂಯೋಜಕ ಗಣೇಶ ಶೆಣೈ ಬೈಲೂರು, ಹೆಬ್ರಿ ತಾಲೂಕು ಅಧ್ಯಕ್ಷ ಡಾ.ರವಿಪ್ರಸಾದ ಹೆಗ್ಡೆ, ಉಪಾಧ್ಯಕ್ಷೆ ಡಾ.ಭಾರ್ಗವಿ ಐತಾಳ್, ಡಾ.ಸರಿತಾ, ಡಾ.ಸುಷ್ಮಾ ಹೆಗ್ಡೆ, ಹಿರಿಯರಾದ ಬಾಲಕೃಷ್ಣ ಮಲ್ಯ, ಸುಧೀರ ನಾಯಕ್, ಕೃಷ್ಣ ಪ್ರಭು, ಉದ್ಯಮಿ ಬಾಲಕೃಷ್ಣ ನಾಯಕ್, ಸದಾನಂದ ನಾಯಕ್ ಹೆಬ್ರಿ, ರಾಮಮಂದಿರದ ವ್ಯವಸ್ಥಾಪಕ ಉಮೇಶ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ.ಸತ್ಯನಾರಾಯಣ ಭಟ್ ಬರೆದ ಆಯುರ್ವೇದ ಭೀಷ್ಮ ಎಡತೊರೆ ಪಾರ್ಥನಾರಾಯಣ ಪಂಡಿತರು ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು. ಡಾ.ರವಿಪ್ರಸಾದ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ತಾಲೂಕು ಕಾರ್ಯದರ್ಶಿ ಹೆಬ್ರಿ ಕೇಶವ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ವಿಘ್ನೇಶ ನಾಯಕ್ ವಂದಿಸಿದರು.