×
Ad

ಶ್ರೀನಾರಾಯಣಗುರು ಉದ್ಯಾನವನದಲ್ಲಿ ದೀಪಾವಳಿ ಆಚರಣೆಗೆ ಚಾಲನೆ

Update: 2025-10-20 18:23 IST

ಉಡುಪಿ, ಅ.20: ಶ್ರೀನಾರಾಯಣ ಗುರು ಯುವ ವೇದಿಕೆ ಉಡುಪಿ ಆಶ್ರಯದಲ್ಲಿ ಉದ್ಯಾವರ ಬಲಾಯಿಪಾದೆ ಹೆದ್ದಾರಿ ಬಳಿ ನಿರ್ಮಾಣ ಗೊಳ್ಳಲಿರುವ ಶ್ರೀ ನಾರಾಯಣಗುರು ಉದ್ಯಾನವನದ ಬಳಿ ದೀಪಾವಳಿ  ಸಂಭ್ರಮಕ್ಕೆ ಕರ್ನಾಟಕ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ನಾರಾಯಣ ಗುರುಗಳ ಬೃಹತ್ ಗೂಡುದೀಪ ಹಾರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಶ್ರೀನಾರಾಯಣ ಗುರು ಉದ್ಯಾನವನದ ನಿರ್ಮಾಣ ನಮ್ಮೆಲ್ಲರ ಮೊದಲ ಆದ್ಯತೆ ಆಗಬೇಕು. ಅದರ ನಿರ್ಮಾಣಕ್ಕೆ ಸಕಲ ಸಮಾಜ ಬಾಂಧವರು ಸಹಕಾರ ನೀಡಬೇಕು ಮತ್ತು ಕರ್ನಾಟಕ ಸರಕಾರದ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮ ಈ ಯೋಜನೆಗೆ ತನ್ನ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ನಾರಾಯಣ ಗುರು ಯುವ ವೇದಿಕೆ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ದಿನೇಶ್ ಜತ್ತನ್ ಅರೂರುತೋಟ, ಕಿರಣ್ ಕುಮಾರ್ ಉದ್ಯವಾರ, ಗಿರೀಶ್ ಕುಮಾರ್, ದಿವಾಕರ್ ಉದ್ಯಾವರ, ಹರೀಶ್ ಪೂಜಾರಿ, ಸುನಿಲ್ ಪೂಜಾರಿ ಮಲ್ಪೆ, ಸುಜಯ್ ಪೂಜಾರಿ ನಿಟ್ಟೂರು, ಶೇಖರ್ ಕೋಟ್ಯಾನ್, ಸಾಯಿರಾಜ್ ಕಿದಿಯೂರು, ಸಚಿನ್ ಸಾಲ್ಯಾನ್, ಲಕ್ಷ್ಮಣ ಸನಿಲ್, ಸತೀಶ್ ಪೂಜಾರಿ, ನವೀನ್ ಪೂಜಾರಿ, ಸಂದೇಶ ಪೂಜಾರಿ, ರಾಯ್ಸ್ ಫೆರ್ನಾಂಡಿಸ್, ಗುಣಾಕರ ಸನಿಲ್, ಕೇಶವ ಸನಿಲ್, ಸುಪ್ರೀತ್ ಸುವರ್ಣ, ಇರ್ಫಾನ್, ನವೀನ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷ ಮಿಥುನ್ ಅಮೀನ್ ಸ್ವಾಗತಿಸಿದರು. ದಿನೇಶ್ ಜತ್ತನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News