×
Ad

ಡಾ.ಬಸವರಾಜ್ ಶೆಟ್ಟಿಗಾರ್‌ಗೆ ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ

Update: 2025-10-20 18:25 IST

ಕೋಟ, ಅ.20: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನೀಯ ರಿಂಗ್ ಪ್ರತಿಷ್ಠಾನ ಟ್ರಸ್ಟ್ ಹಾಗೂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವೇದಿಕೆ ಕೊಡಲ್ಪಡುವ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ವಾಸ್ತುತಜ್ಞ, ಪ್ರಸಂಗಕರ್ತ ಡಾ.ಬಸವರಾಜ್ ಶೆಟ್ಟಿಗಾರ್ ಅವರಿಗೆ ಪ್ರದಾನ ಮಾಡಲಾಯಿತು.

ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭ ದಲ್ಲಿ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಡಾ.ಎಂ.ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿದರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ಡಾ.ಸಿ. ಸೋಮಶೇಖರ್ ವಹಿಸಿದ್ದರು. ಬೆಳಗಾವಿ ಜಿಲ್ಲೆಯ ಅಥಣಿ ಮಠದ ಶ್ರೀ ಪ್ರಭುಚೆನ್ನಬಸವ ಮಹಾಸ್ವಾಮಿ ಹಾಗೂ ಡಾ.ಕಲ್ಮೇಶ್ವರ ಮಹಾಸ್ವಾಮಿಜೀ ಆಶೀರ್ವಚನಗೈದರು.

ಅತಿಥಿಗಳಾಗಿ ಕರ್ನಾಟಕ ರಾಜ್ಯ ಕೈಗಾರಿಕೆ ಮತುತಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಪ್ರತಿಷ್ಠಾನದ ಸಂಚಾಲಕ ಎಂ.ಸಿ.ಕೃಷ್ಣ, ಕನಾಟಕ ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ಎಸ್.ಮುತ್ತುರಾಜ್, ಸಾಹಿತಿ ಡಾ.ರಾಜೇಂದ್ರ ಎಸ್. ಗಡಾದ, ಚಿತ್ರನಟ ಶಂಕರಭಟ್, ಗಣೇಶರಾವ್ ಕೇಸರ‌್ಕರ್, ಮೀನಾ ಉಪಸ್ಥಿತರಿದ್ದು ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News