ರ್ಯಾಂಪ್ ಯೋಜನೆಯಡಿ ಇನ್‌ಕ್ಯೂಬೇಷನ್ ಜಾಗೃತಿ ಕಾರ್ಯಕ್ರಮ
ಉಡುಪಿ, ಡಿ.18: ಎಐಸಿ ನಿಟ್ಟೆ ಇನ್‌ಕ್ಯೂಬೇಷನ್ ಸೆಂಟರ್ ನಿಟ್ಟೆ, ಎನ್.ಎಂ.ಎ.ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ನಿಟ್ಟೆ, ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಹಾಗೂ ಕರ್ನಾಟಕ ತಾಂತ್ರಿಕ ಸಲಹಾ ಸೇವೆಗಳ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಕಳದ ನಿಟ್ಟೆ ಎನ್.ಎಂ.ಎ.ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಲ್ಲಿ ಇತ್ತೀಚೆಗೆ ಕೇಂದ್ರ ಸರಕಾರದ ರ್ಯಾಂಪ್ ಯೋಜನೆಯಡಿಯಲ್ಲಿ ಏರ್ಪಡಿಸಿದ ಇನ್‌ಕ್ಯೂಬೇಷನ್ ಜಾಗೃತಿ ಕಾರ್ಯಕ್ರಮವನ್ನು ಎಂಎಸ್‌ಎಂಇ- ಡಿಎಫ್‌ಒ ಪ್ರಭಾರ ಜಂಟಿ ನಿರ್ದೇಶಕ ಸುಂದರ್ ಶೇರಿಗಾರ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ್ ವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ ಉದ್ಯಮಶೀಲತೆಯ ಮಹತ್ವವನ್ನು ವಿವರಿಸಿದರು. ಚಾರ್ಟೆಡ್ ಅಕೌಂಟೆಟ್ ಎಸ್.ಎಸ್.ನಾಯಕ್ ಹಾಗೂ ಆರ್.ಕೆ ಬಾಲಚಂದ್ರ ಎಂ.ಎಸ್.ಎಂ.ಇ ಯೋಜನೆಗಳು ಹಾಗೂ ಉದ್ಯಮ ಶೀಲತೆ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಸಹಾಯಕ ಸಂಚಾಲಕ ಅರವಿಂದ್ ಬಾಳೇರಿ, ಇನ್‌ಕ್ಯೂಬೇಷನ್ ಮ್ಯಾನೇಜರ್ ಪುನೀತ್ ರೈ, ಪ್ಯಾಬ್ ಲ್ಯಾಬ್ ಕಾರ್ಡಿನೇಟರ್ ಆದರ್ಶ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಡಾ.ಎ.ಪಿ.ಆಚಾರ್ ಸ್ವಾಗತಿಸಿ, ದೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.