ಡಿ.19ರಂದು ಬಹರೇನ್‌ನಲ್ಲಿ ಉಡುಪಿ ಪ್ರಜ್ಞಾನಂ ತಂಡದ ನಾಟಕ ಪ್ರದರ್ಶನ
ಉಡುಪಿ, ಡಿ.18: ಬಹರೇನ ಕನ್ನಡ ಸಂಘದ ಆಶ್ರಯದಲ್ಲಿ ಉಡುಪಿ ಪ್ರಜ್ಞಾನಂ ಟ್ರಸ್ಟ್ ನಿರ್ಮಿಸಿದ ವಿಶಿಷ್ಟ ಏಕವ್ಯಕ್ತಿ ನಾಟಕ ಹೆಜ್ಜೆ ಗೊಲಿದ ಬೆಳಕು ಬಹರೆನ್‌ನ ಮನಾಮಾದ ಕನ್ನಡ ಭವನದಲ್ಲಿ ಡಿ.19ರಂದು ಪ್ರದರ್ಶನಗೊಳ್ಳಲಿದೆ.
ನೃತ್ಯ ವಿದುಷಿ ಸಂಸ್ಕೃತಿ ಅಭಿನಯದ ಈ ನಾಟಕ ಅಮೋಘ ನೃತ್ಯ ಮತ್ತು ಅಭಿನಯ, ಮಾತುಗಾರಿಕೆ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದು ರಂಗಕರ್ಮಿ ಗಣೇಶ್ ರಾವ್ ಎಲ್ಲೂರು ಈ ನಾಟಕ ನಿರ್ದೇಶನ ನೀಡಿದ್ದಾರೆ. ಬೆಳಕು ವಿನ್ಯಾಸ ಶಂಕರ್ ಕೆ. ಶಿವಮೊಗ್ಗ ಮಾಡಿದ್ದು ಸಂಗೀತ ನಿರ್ವಹಣೆ ಸಂಹಿತಾ ಜಿಪಿ ಮಾಡಲಿದ್ದಾರೆ. ಸಾಹಿತಿ ಸುಧಾ ಆಡುಕಳ ನಾಟಕ ರಚನೆ ಮಾಡಿದ್ದಾರೆ.
ಬಹರೇನ್ ಕನ್ನಡ ಸಂಘ ಮತ್ತು ಬಹರೇನ್‌ಲ್ಲಿ ಉದ್ಯೋಗಿಗಳಾಗಿದ್ದು ಪ್ರಜ್ಞಾನಂ ಟ್ರಸ್ಟ್ ಬಂಧುಗಳಾಗಿರುವ ಸುರೇಶ್ ಸಿದ್ದಕೆರೆ, ಶ್ರೀನಾಥ ಚೆಕ್ಕೆ, ಕವಿತಾ ಸುರೇಶ, ರಾಮ ಪ್ರಸಾದ್ ಅಮ್ಮೆನಡ್ಕ ಈ ನಾಟಕ ಪ್ರದರ್ಶನ ಪ್ರಾಯೋಜಿಸಿ ದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಜಿ.ಪಿ.ಪ್ರಭಾಕರ್ ತುಮರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.