×
Ad

ವೃದ್ಧೆ ನಾಪತ್ತೆ

Update: 2025-12-18 20:38 IST

ಉಡುಪಿ, ಡಿ.18: ಬಿಜೂರು ಗ್ರಾಮದ ಕಂಚಿಕಾನ ಎಂಬಲ್ಲಿ ಒಬ್ಬಂಟಿ ಯಾಗಿ ವಾಸವಿದ್ದ ಕೆ.ಲೀಲಾವತಿ ಭಟ್ಟ (71) ಎಂಬ ವೃದ್ಧೆ ಸುಮಾರು ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 ಅಡಿ ಎತ್ತರ, ಉರುಟು ಮುಖ, ಎಣ್ಣೆಕಪ್ಪು ಮೈಬಣ್ಣ, ಸದೃಢ ಶರೀರ ಹೊಂದಿದ್ದು, ಕನ್ನಡ ಹಾಗೂ ಸಂಸ್ಕೃತ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254- 251033, ಮೊ.ನಂ: 9480805459, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ:08254-251031, ಮೊ.ನಂ: 9480805434 ಹಾಗೂ ಕಂಟ್ರೋಲ್ ರೂಂ 100 (0820-2526444) ಅನ್ನು ಸಂಪರ್ಕಿಸಬಹುದು ಎಂದು ಬೈಂದೂರು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News