ಕನ್ನರ್ಪಾಡಿ: ಶೀರೂರು ಪರ್ಯಾಯ ಸಮಾಲೋಚನಾ ಸಭೆ
ಉಡುಪಿ, ಜ.2: ಕಳೆದ 36 ವರ್ಷಗಳಿಂದ ನಿರಂತರವಾಗಿ ಕನ್ನರ್ಪಾಡಿ ಶ್ರೀಜಯದುರ್ಗಾಪರಮೇಶ್ವರೀ ದೇವಸ್ಥಾನದಿಂದ ಪರ್ಯಾಯದ ಹೊರೆಕಾಣಿಕೆ ಅತ್ಯಂತ ವಿಜೃಂಭಣೆಯಿಂದ ಸಮರ್ಪಣೆಯಾಗಿದ್ದು ಈ ಬಾರಿಯ ಶೀರೂರು ಪರ್ಯಾಯಕ್ಕೂ ಶ್ರೀಕ್ಷೇತ್ರದಿಂದ ವೈಭವದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದು ಶ್ರೀಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ಹೇಳಿದ್ದಾರೆ.
ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಶೀರೂರು ಪರ್ಯಾಯದ ಪೂರ್ವಭಾವೀ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಪರ್ಯಾಯ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ ಮಾತನಾಡಿ, ಶೀರೂರು ಶ್ರೀವೇದವರ್ಧನ ತೀರ್ಥರ ಸಂಕಲ್ಪದಂತೆ ಶ್ರೀ ಕೃಷ್ಣ ದೇವರ ನೈವೇದ್ಯದ ಪ್ರತಿಯಾಗಿ ಪ್ರತಿ ಮನೆಯಿಂದ ಹದಿನಾಲ್ಕು ತೆಂಗಿನಕಾಯಿ ಸಮರ್ಪಣೆ ಸಹಿತ ಹೊರೆಕಾಣಿಕೆಯ ವಿವರಗಳನ್ನು ನೀಡಿದರು.
ಸಭೆಯಲ್ಲಿ ಎ.ಸಂಜೀವ, ರಘುನಾಥ್ ಕೋಟ್ಯಾನ್, ನವೀನ್ ಶೆಟ್ಟಿ, ಜಯಕರ ಶೇರಿಗಾರ್, ಗುರುರಾಜ್ ಉಪಾಧ್ಯ, ಎಂ.ರಾಜೇಂದ್ರ, ನಿರುಪಮ ಪ್ರಸಾದ್, ದಾಮೋದರ ಶೇರಿಗಾರ್, ವಿಷ್ಣು ಪ್ರಸಾದ್ ಪಾಡಿಗಾರ್, ರಘುನಾಥ್ ಕೋಟ್ಯಾನ್, ನಾರಾಯಣ ರಾವ್ ಕನ್ನರ್ಪಾಡಿ ಮತ್ತು ವಿವಿಧ ಸಂಘ ಸಂಸ್ಥೆಗಳ ಪಾದಾಧಿಕಾರಿಗಳು ಉಪಸ್ಥಿತರಿದ್ದರು. ಸಂದೀಪ್ ಮಂಜ ಕಾರ್ಯಕ್ರಮ ನಿರೂಪಿಸಿದರು.