×
Ad

ಎಸ್‌ಐಆರ್ ಮೂಲಕ ನಾಗರಿಕರ ಸಂವಿಧಾನಿಕ ಹಕ್ಕುಗಳ ಮೇಲೆ ಪ್ರಹಾರ: ಪ್ರೊ.ಫಣಿರಾಜ್

Update: 2026-06-14 19:37 IST

ಉಡುಪಿ, ಜೂ.14: ಈ ದೇಶ ನಾಗರಿಕರ ಪೌರತ್ವದ ಕುರಿತು ಮಾತನಾಡುವ ಹಕ್ಕು ಚುನಾವಣಾ ಆಯೋಗಕ್ಕೆ ಇಲ್ಲ. ಆದರೆ ಸರಕಾರ ಎಸ್‌ಐಆರ್ ರೂಪದಲ್ಲಿ ಹಿಂಬಾಗಿಲಿನಿಂದ ಚುನಾವಣಾ ಆಯೋಗದ ಮೂಲಕ ಅದನ್ನು ನಡೆಸುತ್ತಿದೆ. ಎಸ್‌ಐಆರ್ ಇಂದು ದೇಶದ ನಾಗರಿಕರ ಸಂವಿಧಾನಿಕ ಹಕ್ಕುಗಳ ಮೇಲೆ ಪ್ರಹಾರ ಮಾಡುತ್ತಿದೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.

ಉಡುಪಿ ಬ್ರಹ್ಮಗಿರಿ ನಾಯರ್‌ಕೆರೆ ಹಾಶಿಮಿ ಮಸೀದಿಯಲ್ಲಿ ರವಿವಾರ ಆಯೋಜಿಸಲಾದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡುತಿದ್ದರು.

ಈ ದೇಶದಲ್ಲಿ ಮೊದಲ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಾಗ ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ತಪ್ಪಿ ಹೋಗಬಾರದೆಂಬ ಕಾರಣಕ್ಕೆ ಮತದಾರರನ್ನು ತಲುಪಿ ಮತದಾರರ ಪಟ್ಟಿ ಸಿದ್ಧಪಡಿ ಸಲಾಗಿತ್ತು. ಅದು ಚುನಾವಣಾ ಆಯೋಗದ ಕರ್ತವ್ಯ ಕೂಡ ಆಗಿತ್ತು. ಆದರೆ ಇವತ್ತು ಸ್ವತಃ ನಾವೇ ಅರ್ಹ ಮತದಾ ರರು ಎಂದು ಸಾಬೀತು ಪಡಿಸಬೇಕಾದ ಪರಿಸ್ಥಿತಿಯನ್ನು ನಿರ್ಮಿಸಲಾಗಿದ್ದು, ಇದು ಸಂವಿಧಾನ ಬಾಹಿರ ನಡೆಯಾ ಗಿದೆ ಎಂದರು.

2002ರ ಮತದಾನದ ಪಟ್ಟಿಯ ಆಧಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮಾಡಲು ಹೊರಟಿದೆ. ಆ ಪಟ್ಟಿಯಲ್ಲಿಯೇ ಹಲವು ಸಮಸ್ಯೆಗಳಿವೆ. ಸರಕಾರ ಮಾಡಿರುವ ತಪ್ಪಿಗೆ ನಾಗರಿಕರು ಸಮಸ್ಯೆಗೆ ಸಿಲುಕುವಂತಾಗಿದೆ. ಈ ಅಸಂವಿ ಧಾನಿಕ ನಡೆಯನ್ನು ಪ್ರಶ್ನಿಸುತಲೇ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಘೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲ ಯಾಸೀನ್ ಕೋಡಿಬೆಂಗ್ರೆ ಹಾಗೂ ಕಾನೂನು ವಿದ್ಯಾರ್ಥಿ ಆಯಾನ್ ಮಲ್ಪೆ ಎಸ್‌ಐಆರ್ ಪ್ರಕ್ರಿಯೆ ಯಾವ ರೀತಿ ನಡೆಸಲಾಗುತ್ತದೆ, ಎಸ್‌ಐಆರ್ ಅರ್ಜಿ ಭರ್ತಿ ಮಾಡುವಿಕೆ, ದಾಖಲಾತಿಗಳ ವಿವರ ಸೇರಿ ದಂತೆ ಹಲವು ವಿಚಾರಗಳ ಕುರಿತು ಪ್ರಾಯೋಗಿಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಹಾಶಿಮಿ ಜಾಮಿಯಾ ಮಸೀದಿ ಅಧ್ಯಕ್ಷ ಝಕ್ರಿಯಾ ಅಸ್ಸಾದಿ, ಸಂಘಟಕರಾದ ಇಕ್ಬಾಲ್ ಮನ್ನಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News