×
Ad

ಭಾರತದಲ್ಲಿ ಲೆಕ್ಕಪರಿಶೋಧಕರಿಗೆ ಉತ್ತಮ ಬೇಡಿಕೆ: ಅರ್ಪಿತ್ ಕಬ್ರಾ

Update: 2026-06-16 19:03 IST

ಉಡುಪಿ, ಜೂ.16: ಐಸಿಎಐನ ಬೋರ್ಡ್ ಆಫ್ ಸ್ಟಡೀಸ್ ಸಹಯೋಗದಲ್ಲಿ -ಐಸಿಎಐ ಉಡುಪಿ ಶಾಖೆ (ಎಸ್‌ಐಆರ್‌ಸಿ) ಹಾಗೂ ಐಸಿಎಐ ಉಡುಪಿ ಶಾಖೆಯ ಸಿಕಾಸಾ(ಎಸ್‌ಐಸಿಎಎಸ್‌ಎ) ವತಿಯಿಂದ ಸಿಎ ವಿದ್ಯಾರ್ಥಿ ಗಳಿಗಾಗಿ ಎರಡು ದಿನಗಳ ರಾಜ್ಯ ಮಟ್ಟದ ಸಮ್ಮೇಳನ ಯುಕ್ತಾ -2026ನ್ನು ಜೂನ್ 12 ಮತ್ತು 13ರಂದು ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಐಸಿಎಐ ಕೇಂದ್ರ ಸಮಿತಿ ಸದಸ್ಯ ಸಿಎ ಅರ್ಪಿತ್ ಜಗದೀಶ್ ಕಬ್ರಾ ಮಾತನಾಡಿ, ಶ್ರದ್ಧೆ, ಕಠಿಣ ಪರಿಶ್ರಮ ದೊಂದಿಗೆ ಸಿಎ ವಿದ್ಯಾಬ್ಯಾಸ ಕಲಿಯಬೇಕು. ಸಾಧನೆಗೆ ಪ್ರತಿಫಲ ಖಂಡಿತ ದೊರೆಯುತ್ತದೆ. ಭಾರತದಲ್ಲಿ ಲೆಕ್ಕಪರಿಶೋಧಕರಿಗೆ ಉತ್ತಮ ಬೇಡಿಕೆ ಇದೆ. ವೃತ್ತಿಪರ ಬೆಳವಣಿಗೆ ಹಾಗೂ ಭವಿಷ್ಯದ ಅವಕಾಶಗಳು ಬಹಳಷ್ಟು ಇದೆ. ಹಿರಿಯರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಉತ್ತಮ ಸಿಎ ಗಳಾಗಿ ರೂಪುಗೊಳ್ಳಬೇಕು ಎಂದರು.

ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷ ಸಿಎ ಎಂ.ರಾಘವೇಂದ್ರ ಮೊಗೇರಾಯ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳ ನ್ನಾಡಿದರು. ಉಪಾಧ್ಯಕ್ಷ ಸಿಎ ಅಶ್ವತ್ ಜೆ.ಶೆಟ್ಟಿ, ಖಜಾಂಚಿ ಸಿಎ ಅರ್ಚನಾ ಆರ್.ಮೈಯ್ಯ, ಕಾರ್ಯದರ್ಶಿ ಸಿಎ ಕೆ.ಲಕ್ಷ್ಮೀಶ ರಾವ್, ಸಿಕಾಸಾ ಅಧ್ಯಕ್ಷ ಸಿಎ ಸೋನಿತ್ ಎಸ್.ಶೆಟ್ಟಿ, ಶಾಖೆಯ ಮಾಜಿ ಅಧ್ಯಕ್ಷರುಗಳು, ಸದಸ್ಯರು ಹಾಗೂ ಸಿಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News