×
Ad

ಪರಿಸರ ನಮ್ಮನ್ನು ಶಿಕ್ಷಿಸುವ ಮೊದಲು ರಕ್ಷಿಸಬೇಕು: ಡಾ.ಮದ್ದೋಡಿ

Update: 2026-06-16 19:08 IST

ಮಲ್ಪೆ, ಜೂ.16: ಇಂದಿನ ಯುವಕರು ಮಾನವೀಯತೆ ಕಳೆದುಕೊಂಡಿ ರುವ ಪರಿಸರವನ್ನು ಪುನಃಸ್ಥಾಪಿಸಲು ಆಂದೋಲನವನ್ನು ಪ್ರಾರಂಭಿಸಬೇಕು. ಪರಿಸರ ನಮ್ಮ ವಿರುದ್ಧ ದಂಗೆ ಏಳುವುದಕ್ಕೆ ಮುನ್ನ ನಾವು ಏಳಬೇಕು ಎಂದು ಪರಿಸರ ವಿಜ್ಞಾನಿ ಡಾ.ಬಾಲಕೃಷ್ಣ ಎಸ್.ಮದ್ದೋಡಿ ಹೇಳಿದ್ದಾರೆ.

ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಭವಿಷ್ಯದ ಪೀಳಿಗೆಯ ಉಳಿವಿಗಾಗಿ ಮೂರು ಮೂಲಭೂತ ನೈಸರ್ಗಿಕ ಸಂಪನ್ಮೂಲ ಗಳಾದ ಗಾಳಿ, ನೀರು ಮತ್ತು ಮಣ್ಣನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ತುರ್ತು ಅಗತ್ಯ ಇದೆ ಎಂದರು.

ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಜವಾಬ್ದಾರಿಯುತ ಬಳಕೆ ಮತ್ತು ಸಂಪನ್ಮೂಲ ನಿರ್ವಹಣೆ ಅತ್ಯ ಗತ್ಯ. ವಿದ್ಯಾರ್ಥಿಗಳು ಪರಿಸರ ರಾಯಭಾರಿಗಳಾಗಬೇಕು ಮತ್ತು ತಮ್ಮ ಸಮುದಾಯಗಳಲ್ಲಿ ಸಂರಕ್ಷಣಾ ಉಪಕ್ರಮ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ವರ್ಗೀಸ್ ಪಿ. ವಹಿಸಿದ್ದರು. ಡಾ.ವಿಶಾಲಾಕ್ಷಿ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕಿ ಜಯಶ್ರೀ ಎಂ.ಸಿ ವಂದಿಸಿದರು. ಸುಬ್ರಾಯ ಭಾಗವತ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ, ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News