ತೋನ್ಸೆ: ಶೈಕ್ಷಣಿಕ ಸಹಭಾಗಿತ್ವದ ಕಾರ್ಯಕ್ರಮ

Update: 2026-07-28 20:21 IST

ಉಡುಪಿ, ಜು.28: ತೋನ್ಸೆ ಹೆಲ್ತ್ ಸೆಂಟರ್, ಮುನಿಯಾಲು ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನ ಶೈಕ್ಷಣಿಕ ಸಹಭಾಗಿತ್ವದ ಕಾರ್ಯಕ್ರಮವನ್ನು ಜು.26ರಂದು ತೋನ್ಸೆ ಹೆಲ್ತ್ ಸೆಂಟರ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಎರಡೂ ಸಂಸ್ಥೆಗಳ ಸಹಭಾಗಿತ್ವದ ಒಪ್ಪಿಗೆ ಪತ್ರವನ್ನು ಹಸ್ತಾಂತರಿಸಿದರು. ಮೊಹಮ್ಮದ್ ಸಾಧಿಕ್ ಗುಡ್ಮೆ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮುಸ್ತಫಾ ಸಅದಿ, ಡಾ.ಅಪರ್ಣಾ ಮತ್ತು ರಕೀಬ್ ಕಣ್ಣಂಗಾರ್ ಹಾಗೂ ತೋನ್ಸೆ ಹೆಲ್ತ್ ಸೆಂಟರ್‌ನ ಸಂಸ್ಥಾಪಕ ಬಿ.ಎಂ. ಜಾಫರ್, ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರುತಾ ದಯಾನಂದ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಧಕರಾದ ಯೋಗೀಶ್ ಶೆಟ್ಟಿ, ಜಿ.ಅಶ್ರಫ್, ಸತೀಶ್ ಶೆಟ್ಟಿ ಕೆಮ್ಮಣ್ಣು, ಅಸ್ಲಂ ಹೈಕಾಡಿ, ಥಾಮಸ್ ಡಿಸೋಜ, ಶೋಭಾ ರಾಣಿ, ಸುನಂದ ಸದಾನಂದ ಅವರನ್ನು ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಸರಕಾರಿ ಕಾಲೇಜ್ ಕೆಮ್ಮಣ್ಣು, ಕಾರ್ಮೆಲ್ ಸ್ಕೂಲ್ ಕೆಮ್ಮಣ್ಣು, ದಾರುಸ್ಸಲಾಮ ವಿದ್ಯಾ ಸಂಸ್ಥೆ ಹೂಡೆ ಹಾಗೂ ಸಾಲಿಹಾತ್ ವಿದ್ಯಾಸಂಸ್ಥೆ ಹೂಡೆ ಇದರ 17 ಮಕ್ಕಳನ್ನು ಗುರುತಿಸಿ ಗೌರವಿ ಸಲಾಯಿತು.

ಸಂಸ್ಥೆಯ ಮ್ಯಾನೇಜರ್ ಹರೀಶ್ ಶೆಟ್ಟಿ ಸ್ವಾಗತಿಸಿದರು. ಅಕೌಂಟೆಂಟ್ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News