ಆರ್‌ಎಸ್‌ಬಿ ಸಾಧಕರಿಗೆ ಸನ್ಮಾನ-ಪ್ರತಿಭಾ ಪುರಸ್ಕಾರ
ಉಡುಪಿ, ಆ.9: ಮಣಿಪಾಲ ರಾಜಾಪುರ ಸಾರಸ್ವತ ಮಳಾ ವೇದಿಕೆ ವತಿುಂದ ಆರ್‌ಎಸ್‌ಬಿ ಸಭಾಭವನದಲ್ಲಿ ಜರಗಿದ ವಾರ್ಷಿಕ ಮಹಾ ಸಭೆಯಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮತ್ತು ಆರ್ಥಿಕವಾಗಿ ಹಿಂದು ಳಿದ 53 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಶಕ್ತ ಮತ್ತು ಅಸಹಾಯಕ ಮಹಿಳೆಯರಿಗೆ ಸಹಾಯಧನ ನೀಡಲಾಯಿತು.
ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷೆ ರೂಪಾ ನಾಯಕ್ ವಹಿಸಿದ್ದರು. ರವಿಜಾ ನಾಯಕ್, ಸುಮಾ ಎಸ್.ನಾಯಕ್ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಚಂದ್ರಿಕಾ ನಾಯಕ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಪುಷ್ಪಾ ಪ್ರಭು ವಾರ್ಷಿಕ ಆಯವ್ಯಯ ಮಂಡಿಸಿದರು.
ವೇದಿಕೆಯ ಸ್ಥಾಪಕ ಅಧ್ಯಕ್ಷೆ ಸುನೀತಾ ಎನ್.ನಾಯಕ್ ವೇದಿಕೆ ಸಾಧನೆಗಳ ಬಗ್ಗೆ ಮಾತನಾಡಿದರು. ಮೋಹಿನಿ ಎನ್.ನಾಯಕ್ ದಾನಿಗಳ ಹೆಸರು ವಾಚಿಸಿದರು. ಭಾರತಿ ನಾಯಕ್, ಪ್ರೀತಿ ಕಾಮತ್ ಪ್ರಾರ್ಥಿಸಿದರು. ಉಪಾಧ್ಯಕ್ಷೆ ಉಜ್ವಲಾ ನಾಯಕ್ ಸ್ವಾಗತಿಸಿದರು. ಡಾ.ವಿದ್ಯಾಲತಾ ನಾಯಕ್ ವಂದಿಸಿದರು. ಜಯಶ್ರೀ ಎಂ.ನಾಯಕ್ ನಿರೂಪಿಸಿದರು.