ರಸ್ತೆ ಗುಂಡಿ ತಪ್ಪಿಸುವ ಭರದಲ್ಲಿ ಸ್ಕೂಟರ್ ಪಲ್ಟಿ: ಸಹಸವಾರೆ ಮೃತ್ಯು

Update: 2026-08-12 21:17 IST

ಶಿರ್ವ : ರಸ್ತೆಯ ಹೊಂಡ ತಪ್ಪಿಸುವ ಭರದಲ್ಲಿ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪಂಜಿಮಾರು ಸಮೀಪದ ಕೋಡು-ಪಾಲಮೆ ಎಂಬಲ್ಲಿ ನಡೆದಿದೆ.

ಮೃತರನ್ನು ಕುರ್ಕಾಲು ಗ್ರಾಮದ ಗಣೇಶ್ ಎಂಬವರ ಪತ್ನಿ ರಾಜೇಶ್ವರಿ (47) ಎಂದು ಗುರುತಿಸಲಾಗಿದೆ. ಆ.9ರಂದು ಮಧ್ಯಾಹ್ನ ಗಣೇಶ್ ಸ್ಕೂಟರ್‌ನಲ್ಲಿ ತನ್ನ ಪತ್ನಿಯನ್ನು ಹಿಂಬದಿ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಶಿರ್ವ ಪೇಟೆಗೆ ಹೊರಟಿದ್ದರು. ಈ ವೇಳೆ ಗಣೇಶ್ ರಸ್ತೆಯಲ್ಲಿರುವ ಹೊಂಡವನ್ನು ತಪ್ಪಿಸುವಾಗ ಸ್ಕೂಟಿಯ ಮೇಲಿನ ನಿಯಂತ್ರಣ ತಪ್ಪಿ ಸ್ಕೂಟಿ ಸಮೇತ ಇಬ್ಬರು ರಸ್ತೆಗೆ ಬಿದ್ದರು.

ಇದರಿಂದ ಗಂಭೀರವಾಗಿ ಗಾಯಗೊಂಡ ರಾಜೇಶ್ವರಿ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆ.10ರಂದು ಸಂಜೆ ವೇಳೆ ಮೃತಪಟ್ಟರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News