ಆ.16ಕ್ಕೆ ‘ಹೇಮಾದ್ರಿ ಗಿರಿಬಾಲೆ’ ಯಕ್ಷಗಾನ ಪ್ರಸಂಗ ಬಿಡುಗಡೆ

Update: 2026-08-12 21:46 IST

ಉಡುಪಿ, ಆ.12: ವೀರರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತ ಶುಭಾಶಯ ಜೈನ್ ಅವರು ರಚಿಸಿದ ‘ಹೇಮಾದ್ರಿ ಗಿರಿಬಾಲೆ’ ಯಕ್ಷಗಾನ ಪ್ರಸಂಗದ ಬಿಡುಗಡೆ ಹಾಗೂ ಅದರ ಪ್ರದರ್ಶನ ಆ.16ರಂದು ರವಿವಾರ ಬ್ರಹ್ಮಾವರ ಸಮೀಪದ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ನಡೆಯಲಿದೆ.

ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯಡಿ ವಂಡಾರು ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ಆಯೋಜನೆಯಲ್ಲಿ ಇದರ ಪ್ರದರ್ಶನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಪರಾಹ್ನ 3 ಗಂಟೆಗೆ ನಡೆಯಲಿದೆ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಪ್ರಸಂಗ ವನ್ನು ಬಿಡುಗಡೆಗೊಳಿಸಲಿದ್ದಾರೆ.

ಭಾಗವತರಾದ ಮೂಡುಬೆಳ್ಳೆ ಚಂದ್ರಕಾಂತ್ ರಾವ್ ಅವರ ಸಾರಥ್ಯದಲ್ಲಿ ನಡೆಯುವ ಪ್ರದರ್ಶನದಲ್ಲಿ ಕಲಾವಿದರಾದ ಕ್ಯಾದಗಿ ಮಹಾಬಲೇಶ್ವರ ಭಟ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಪ್ರಕಾಶ ಕಿರಾಡಿ, ವಂಡಾರು ಗೋವಿಂದ, ಪ್ರಭಾಕರ ಬೇಳಂಜೆ, ಜಯಂತ್ ಸುರ್ಗೋಳಿ ಭಾಗವಹಿಸಲಿದ್ದಾರೆ ಎಂದು ಸಂಘಟಕ ಗೋವಿಂದ ವಂಡಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News