‘ರಾ.ಹೆದ್ದಾರಿ 66ರ ಹೆಚ್ಚುವರಿ ಕಾಮಗಾರಿ ಶೀಘ್ರ ಪ್ರಾರಂಭ’
ಉಡುಪಿ, ಆ.12: ಕುಂದಾಪುರದಿಂದ ಹೆಜಮಾಡಿವರೆಗೆ ಮತ್ತು ಹೆಜಮಾಡಿಯಿಂದ ಕೇರಳದ ಗಡಿವರೆಗಿನ ಎನ್.ಹೆಚ್-66ರ ಪ್ರಧಾನ ರಸ್ತೆ ಹಾಗೂ ಸರ್ವಿಸ್ ರಸ್ತೆಯ ಕುರಿತು ಸಮಗ್ರ ಡಿಪಿಆರ್ ಸಿದ್ದಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲಹಾ ಸಂಸ್ಥೆಯೊಂದನ್ನು ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕುಂದಾಪುರದಿಂದ ಪ್ರಾರಂಭಗೊಂಡು ಹೆಜಮಾಡಿವರೆಗಿನ ಸಂಚಾರ ದಟ್ಟಣೆ, ರಸ್ತೆ ಸುರಕ್ಷತೆಯ ಅವಶ್ಯಕತೆಗಳು, ಎನ್.ಹೆಚ್ 66 ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆಗಳು, ಅಗತ್ಯವಿರುವ ಕಡೆ ಫ್ಲೈಓವರ್‌ಗಳು ಅಗತ್ಯಕ್ಕನು ಗುಣವಾಗಿ ಹೆಚ್ಚುವರಿ ಅಂಡರ್‌ಪಾಸ್‌ಗಳು, ಒಟ್ಟಾರೆ ಅಪಘಾತ ರಹಿತ ಹೆದ್ದಾರಿ ಸಂಚಾರಕ್ಕೆ ಪ್ರಸ್ತುತ ಯೋಜನಾ ವರದಿ ಸಿದ್ದವಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕುಂದಾಪುರದಿಂದ ಹೆಜಮಾಡಿ, ಮುಂದುವರೆದು ಕೇರಳದ ಗಡಿಯಲ್ಲಿ ಅಪಾರ ವಾಹನದಟ್ಟಣೆಯಿಂದ ಆಗಬಹುದಾದ ಅವಘಡಗಳ ಹಿನ್ನೆಲೆಯಲ್ಲಿ ಸಂಸದ ಕೋಟ ಕೇಳಿದ ಪ್ರಶ್ನೆಗೆ ಗಡ್ಕರಿ ಉತ್ತರಿಸಿದ್ದರು.