ಮೂಳೂರು ಅಲ್‌ಇಹ್ಸಾನ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕಾಪು, ಆ.15: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಅಧೀನ ಸಮೂಹ ಸಂಸ್ಥೆಗಳಾದ ಮೂಳೂರಿನ ಅಲ್ ಇಹ್ಸಾನ್ ಗ್ರೂಪ್ ಆಫ್ ಎಜುಕೇಶನಲ್ ಇನ್ಸ್ಟಿಟ್ಯೂಟ್‌ನಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಡಿಕೆಎಸ್‌ಸಿ ಕೇಂದ್ರ ಸಮಿತಿಯ ಸದಸ್ಯರಾದ ಅಬ್ದುಲ್ ಅಝೀಝ್ ಮೂಡು ತೋಟ ನೆರವೇರಿ ಸಿದರು. ಅಲ್ ಇಹ್ಸಾನ್ ದಅವಾ ಕಾಲೇಜಿನ ಪ್ರಾಧ್ಯಾಪಕ ಅದ್ನಾನ್ ಅಬ್ದುಲ್ಲಾ ನೂರಾನಿ ಸಂದೇಶ ಭಾಷಣಗೈದರು.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೆ.ಎಚ್.ರಫೀಕ್ ಸೂರಿಂಜೆ, ಸಂವಹನ ಕಾರ್ಯದರ್ಶಿ ಜಮಾಲುದ್ದೀನ್ ಸ್ವಾಲಿಹ್ ಕಣ್ಣಂಗಾರ್, ಕೇಂದ್ರ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಅರಾಮಿಕ್ಸ್, ಹಸನ್ ಮೂಡುತೋಟ, ಸದಸ್ಯರಾದ ಅಬ್ದುಲ್ ಹಮೀದ್ ಕೃಷ್ಣಾಪುರ, ಸಯ್ಯದ್ ಅಬ್ದುಲ್ ರಹ್ಮಾನ್ ಉಚ್ಚಿಲ ತಂಗಳ್, ಅಲ್ ಇಹ್ಸಾನ್ ಅಡ್ವೈಸರ್ ಅನ್ವರ್ ಹುಸೇನ್ ಗೂಡಿನಬಳಿ, ಜಿಲ್ಲಾ ಸಮಿತಿಯ ಸದಸ್ಯರಾದ ಮನ್ಸೂರ್ ಹಾಜಿ ಕೃಷ್ಣಾಪುರ, ಅಹ್ಮದ್ ಹಾಜಿ ಕರ್ನಿರೆ, ಅಬೂಬಕ್ಕರ್ ಹಾಜಿ ನೇಜಾರ್, ಹಾಜಬ್ಬಾ, ನಝೀರ್ ಕಣ್ಣಂಗಾರ್ ಉಪಸ್ಥಿತರಿದ್ದರು.
ಅಲ್ ಇಹಸನ್ ಪ್ಲೇ ಏರಿಯಾ ಇದರ ಉದ್ಘಾಟನೆಯನ್ನು ಆಂಪ್ಲಿಟ್ಯುಡ್ ಅಬ್ದುಲ್ ಜುನೈದ್ ನೆರವೇರಿಸಿದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಮೌಲಾನಾ ಯು.ಕೆ.ಮುಸ್ತಫಾ ಸಹದಿ, ಸಹ ವ್ಯವಸ್ಥಾಪಕ ಸಿದ್ದೀಕ್ ಸಹದಿ ಉಪಸ್ಥಿತರಿದ್ದರು.
ಪ್ರಾಂಶುಪಾ ಹಬೀಬುರಹಮಾನ್ ಕೆ.ಎಸ್. ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಆರಿಪ ಶಿರೀನ್ ಜಕಾತಿ ವಂದಿಸಿದರು. ಕಲಂದರ್ ಶಾಪಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾ ಯನಿ ಸಯ್ಯದ್ ಶಬಾನ, ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ನೆಫೀಸ, ದೈಹಿಕ ಶಿಕ್ಷಣ ಶಿಕ್ಷಕರಾದ ಬಶೀರ್ ಎಂ., ಸದ್ದಾಂ ಹುಸೇನ್, ಸುಮನ ಕಿಶೋರ್ ಸಹಕರಿಸಿದರು.