ಕಾರ್ಕಳ ಎನ್‌ಎಸ್ ಅಕಾಡೆಮಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕಾರ್ಕಳ, ಆ.16: ಕಾರ್ಕಳ ಎನ್‌ಎಸ್ ಅಕಾಡೆಮಿ ಹಾಗೂ ಕಮ್ಯೂನಿಟಿ ಸೆಂಟರನಲ್ಲಿ 80ನೇ ಸ್ವಾಂತಂತ್ರ್ಯೋತ್ಸವದ ಧ್ವಜಾರೋಹಣವನ್ನು ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಅಧ್ಯಕ್ಷ ಡಾ.ರಿಜ್ವಾನ್ ಅಹಮದ್ ಕಾರ್ಕಳ ನೆರವೇರಿಸಿದರು.
ಅಧ್ಯಕ್ಷತೆಯನ್ನು ಕಾರ್ಕಳ ಎನ್‌ಎಸ್ ಅಕಾಡೆಮಿ ಹಾಗೂ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಫಿರು ಸಾಹೇಬ್, ಸೆಂಟ್ರಲ್ ಕಮಿಟಿ ಸದಸ್ಯ ಮೊಹಮ್ಮದ್ ಹೊಸೇನ್ ಕಾರ್ಕಳ, ಎನ್‌ಎಸ್ ಅಕಾಡೆಮಿ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋಹ್ಸಿನ್, ಜಿಲ್ಲಾ ಸಮಿತಿ ಸದಸ್ಯ ಹಾರೂನ್ ರಶೀದ್, ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಮುಸ್ತಾಫಾ, ತಾಲೂಕು ಮಾಜಿ ಅಧ್ಯಕ್ಷ ಶಾಕಿರ್ ಶೀಶ್, ಸ್ಥಳೀಯರಾದ ಇಮ್ರಾನ್, ಅಝೀಝ್ ಉಪಸ್ಥಿತರಿದ್ದರು.
ಮೌಲಾನಾ ರಹೀಮ್ ಕಿರಾತ್ ಪಠಿಸಿದರು. ಅಕಾಡೆಮಿ ಕಾರ್ಯಕಾರಿ ಸದಸ್ಯ ಅಬ್ದುಲ್ ಶುಕುರ್ ಬೆಳ್ವೆ ಸ್ವಾಗತಿಸಿ ದರು. ಎನ್‌ಎಸ್ ಅಕಾಡೆಮಿ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಅಜೆಕಾರು ವಂದಿಸಿದರು. ಅಹ್ಲೀ ರಸೂಲ್ ಕಾರ್ಯಕ್ರಮ ನಿರೂಪಿಸಿದರು.