ಸ್ವಾತಂತ್ರ್ಯದಂತೆ ಅಸ್ಪೃಶ್ಯತೆ ವಿರುದ್ಧವೂ ಹೋರಾಟ ಅನಿವಾರ್ಯ: ಶುಭದರಾವ್
ಕಾರ್ಕಳ, ಆ.16: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಶುಭದರಾವ್ ಮಾತನಾಡಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಹಿಂದು ಸಂಘಟನೆಗಳು ಶುದ್ದೀಕರಣ ನಡೆಸಿರುವುದು ಖಂಡನೀಯ. ದೇಶ 80 ನೇ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುತ್ತಿದ್ದರೂ ಇನ್ನೂ ಕೂಡ ದೇಶದಲ್ಲಿ ಅಸ್ಪ್ರಶ್ಯತೆಯನ್ನು ಆಚರಿಸುತ್ತಿರುವುದು ಅಘಾತಕಾರಿಯಾಗಿದೆ. ಸ್ವಾತಂತ್ರ್ಯ ಸಂಗ್ರಾಮವನ್ನು ನಡೆಸಿದಂತೆ ಅಸ್ಪ್ರಶ್ಯತೆಯ ವಿರುದ್ದವೂ ದೇಶದಲ್ಲಿ ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದರು.
ಧ್ವಜಾರೋಹಣವನ್ನು ಹಿರಿಯ ಕಾಂಗ್ರೆಸ್ ಮುಖಂಡ ಶೇಖರ ಮಡಿವಾಳ ನೆರವೇರಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ, ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ತಾಲೂಕು ಗ್ಯಾರಂಟಿ ಸಮಿತಿ ಅದ್ಯಕ್ಷ ಅಜಿತ್ ಹೆಗ್ಡೆ ಮತ್ತು ಉಸ್ತುವಾರಿ ಭರತ್ ಮುಂಡೋಡಿ ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ಸುಧಾಕರ ಕೋಟ್ಯಾನ್, ಜಾರ್ಜ್ ಕ್ಯಾಸ್ಟಲಿನೊ, ಉದಯ ಶೆಟ್ಟಿ ಕುಕ್ಕುಂದೂರು, ಸಿರಿಯಣ್ಣ ಶೆಟ್ಟಿ, ಸೂರಜ್ ಶೆಟ್ಟಿ ನಕ್ರೆ, ಅಬ್ದುಲ್ ಸಾಣೂರು, ಭಾನು ಬಾಸ್ಕರ ಪೂಜಾರಿ, ರಾಜೇಂದ್ರ ದೇವಾಡಿಗ, ರೀನಾ ಡಿಸೋಜ, ಅನಿಲ್ ಪೂಜಾರಿ ಮಾಳ, ದೇವದಾಸ್ ಉಪಸ್ಥಿತರಿದ್ದರು. ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅದ್ಯಕ್ಷ ಶೇಕ್ ಶಭೀರ್ ವಂದಿಸಿದರು. ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು.