ಉಡುಪಿ: ಕಣ್ಮನ ಸೆಳೆದ ಶಾಲಾ ಮಕ್ಕಳ ಸಾಂಸ್ಕೃತಿಕ ದೃಶ್ಯವೈಭವ

Update: 2026-08-15 21:49 IST

ಉಡುಪಿ, ಆ.15: ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಕೊನೆಯಲ್ಲಿ ಐದು ತಂಡಗಳು ವಿವಿಧ ವಿಷಯಗಳ ಮೇಲೆ ಪ್ರದರ್ಶಿಸಿದ ಹಾಡು-ಕುಣಿತಗಳ ಸಾಂಸ್ಕೃತಿಕ ಕಾರ್ಯ ಕ್ರಮಗಳು ನೆರೆದವರ ಕಣ್ಮನ ಸೂರೆಗೊಂಡವು.

ಭಾಗವಹಿಸಿದ ಐದು ತಂಡಗಳು ಪರಿಸರ ಸಂರಕ್ಷಣೆ, ನೀರಿನ ಮಿತ ಬಳಕೆ, ಸ್ವಚ್ಛತೆ ಹಾಗೂ ಇತರ ವಿಷಯಗಳ ಮೇಲೆ ತಮ್ಮ ಹಾಡು-ನೃತ್ಯ- ಕುಣಿತಗಳನ್ನು ಪ್ರದರ್ಶಿಸಿದವು. ಇದರಲ್ಲಿ ಆದಿಉಡುಪಿಯ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ತಂಡ ಜಿಲ್ಲೆಯ ಕಲೆ, ಸಂಸ್ಕೃತಿ ವೈಭವವನ್ನು ಪ್ರದರ್ಶಿಸಿ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿತು. ಉದ್ಯಾವರದ ಸೈಂಟ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಬಹುಮಾನ, ಸರಕಾರಿ ಪ್ರೌಢಶಾಲೆ ವಳಕಾಡು ತೃತೀಯ, ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಸೈಂಟ್ ಸಿಸಿಲೀಸ್ ಆಂಗ್ಲಮಾಧ್ಯಮ ಶಾಲೆ ಉಡುಪಿ ಸಮಾಧಾನಕರ ಬಹುಮಾನ ಪಡೆದವು.

ಪಥಸಂಚಲನ: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಆಕರ್ಷಕವಾಗಿ ಪಥ ಸಂಚಲನ ನಡೆಸಿದ ಕಾಲೇಜು ವಿಭಾಗದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಎನ್‌ಸಿಸಿ ಆರ್ಮಿ ಪ್ರಥಮ, ಕುಂಜಿಬೆಟ್ಟು ಮಹಾತ್ಮಾಗಾಂಧಿ ಮೆಮೋರಿಯಲ್ ಕಾಲೇಜಿನ ಎನ್‌ಸಿಸಿ ನೇವಿ ವಿಭಾಗ ದ್ವಿತೀಯ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಎನ್‌ಸಿಸಿ ನೇವಿ ತೃತೀಯ ಸ್ಥಾನ ಪಡೆದವು.

ಪ್ರೌಢ ಶಾಲಾ ವಿಭಾಗದಲ್ಲಿ ವಳಕಾಡು ಸರಕಾರಿ ಪ್ರೌಢಶಾಲೆ ಎನ್‌ಸಿಸಿ ನೇವಿ ಪ್ರಥಮ, ಮಣಿಪಾಲದ ಮಾಧವಕೃಪಾ ಪ್ರೌಢಶಾಲೆ ಎನ್‌ಸಿಸಿ ಆರ್ಮಿ ದ್ವಿತೀಯ ಹಾಗೂ ಯು. ಕಮಲಾಬಾು ಪ್ರೌಢಶಾಲೆ ಎನ್‌ಸಿಸಿ ನೇವಿ ತೃತೀಯ ಸ್ಥಾನ ಪಡೆದುಕೊಂಡವು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಒಳಕಾಡು ಸರಕಾರಿ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆಯಿತು.

ಸರ್ವೋತ್ತಮ ಸೇವಾ ಪ್ರಶಸಿ್ತ: ನಾಗರಿಕ ಸೇವೆಗಾಗಿ ಸನ್ಮಾನಿತರಾದ ಸರಕಾರಿ ನೌಕರರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಚಿಕ್ಮರಿ, ಉದ್ಯಾವರ ಪಶು ಚಿಕಿತ್ಸಾಲಯದ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಹೆಚ್.ಎನ್ ಸಂದೀಪ್ ಕುಮಾರ್, ವಾರಂಬಳ್ಳಿ ಗ್ರಾಮ ಪಂಚಾಯತ್ ಪಿಡಿಓ ಫರ್ಝಾನಾ, ಕೋಡಿ ಗ್ರಾಪಂನ ಪಿಡಿಓ ರವೀಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕಿ ಸುಗುಣ, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಪ್ರ.ದ.ಸ ಭವಾನಿ ಶಂಕರ್, ಉಡುಪಿ ತಾಲೂಕು ಭೂಮಾಪಕ ರಮೇಶ್ ಅವ್ವಣ್ಣಾ ಅಮಾತೆ, ಜಿಲ್ಲಾಧಿಕಾರಿಗಳ ಕಛೇರಿಯ ಗ್ರಾಮ ಆಡಳಿತ ಅಧಿಕಾರಿ ಜಿಯಾವುದ್ದೀನ್ ನಾಗೂರು ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯ ಗ್ರೂಪ್ ಡಿ ನೌಕರರಾದ ವಸಂತಿ ಇವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಲಭಿಸಿದವು.

ಚಿತ್ರಕಲಾ ಸ್ಪರ್ಧೆ ವಿಜೇತರು: ಸ್ವಾತಂತ್ರ್ಯೋತ್ಸವದ ಪೂರ್ವಭಾವಿಯಾಗಿ ‘ನನ್ನ ದೃಷ್ಟಿಯಲ್ಲಿ ನೂತನ ಉಡುಪಿ ಜಿಲ್ಲೆ’ ಎಂಬ ರ್ಶೀಕೆಯಡಿ ನಡೆಸಲಾದ ಚಿತ್ರಕಲಾ ಸ್ಪರ್ಧೆ -2026ರ ವಿಜೇತರು.

ಕನ್ನರ್ಪಾಡಿ ಸೈಂಟ್ ಮೇರೀಸ್ ಆ.ಮಾ.ಪ್ರೌಢಶಾಲೆಯ 8 ನೇ ತರಗತಿಯ ಅನ್ವಿತ್ ಶೆಟ್ಟಿಗಾರ್ ಪ್ರಥಮ, ಮುಳೂರು ಅಲ್ ಇಹ್ಸಾನ್ ಆ.ಮಾ.ಪ್ರೌ. ಶಾಲೆಯ 10 ನೇ ತರಗತಿಯ ಶಮ್ನಾ ದ್ವಿತೀಯ, ಪಣಿಯಾಡಿ ಅನಂತೇಶ್ವರ ಆ.ಮಾ.ಹಿ.ಪ್ರಾ.ಶಾಲೆಯ 6ನೇ ತರಗತಿಯ ಪಾವನಿ ಜಿ.ರಾವ್ ತೃತೀಯ, ಉಡುಪಿ ಮುಕುಂದ ಕೃಪಾ ಆಂ.ಮಾ.ಶಾಲೆಯ 6ನೇ ತರಗತಿಯ ತೇಜಸ್ವಿ ಹಾಗೂ ಉಡುಪಿ ಬಾಲಕಿಯರ ಸ.ಪ.ಪೂ. ಕಾಲೇಜಿನ 10ನೇ ತರಗತಿಯ ಅವನಿ ಎಂ ಮೇಸ್ತ್ರ ಸಮಾಧಾನಕರ ಬಹುಮಾನ ಪಡೆದರು.

ಮ್ಯಾಸ್ಕಾಟ್ ಸ್ಪರ್ಧೆ: ಪ್ರವಾಸೋದ್ಯಮ ಇಲಾಖೆಗಾಗಿ ನಡೆದ ಮಾಸ್ಕಾಟ್ ಸ್ಪರ್ಧೆಯಲ್ಲಿ ನಗರದ ದಂತವೈದ್ಯ ಡಾ. ವಿಜಯೇಂದ್ರ ರಾವ್ ಇವರ ಚಿತ್ರ ಆಯ್ಕೆಯಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರಶಸ್ತಿ ಪತ್ರ ಹಾಗೂ 10,000 ರೂ. ನಗದು ಬಹುಮಾನ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News