ಶ್ವೇತಾ ಪ್ರಸನ್ನ ಶೆಟ್ಟಿಗೆ ಪಿಎಚ್ಡಿ ಪದವಿ ಪ್ರದಾನ
ಹೆಬ್ರಿ, ಸೆ.30: ಎ.ಜೆ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿ ಹಾಗೂ ವಿಭಾಗ ಮುಖ್ಯಸ್ಥೆ ಡಾ.ಶಾಂತಕುಮಾರಿ. ಕೆ. ಇವರ ಮಾರ್ಗದರ್ಶನದಲ್ಲಿ ಶ್ವೇತಾ ಪಿ.ಶೆಟ್ಟಿ ಸಲ್ಲಿಸಿದ ಎ ಸ್ಟಡಿ ಆಫ್ ಸಿಂಗಲ್ ಅಂಡ್ ಡಬಲ್ ಇಂಟಿಗ್ರಲ್ಸ್ ಇನ್ವಾಲ್ವಿಂಗ್ ಹೈಪರ್ಜಿಯೋಮೆಟ್ರಿಕ್ ಅಂಡ್ ಜನರಲೈಸ್ಡ್ ಹೈಪರ್ಜಿಯೋಮೆಟ್ರಿಕ್ ಫಂಕ್ಷನ್ಸ್ ವಿದ್ ಅಪ್ಲಿಕೇಶನ್ಸ್ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಮಂಗಳೂರಿನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ಪೆರ್ಡೂರು ಮೂಲದ ಪುಣೆಯಲ್ಲಿ ಉದ್ಯಮಿ ಪ್ರಸನ್ನ ಶೆಟ್ಟಿ ಅವರ ಪತ್ನಿಯಾಗಿದ್ದು, ಎರ್ಮಾಳು ಪುಚೊಟ್ಟು ದಿ.ಸುಂದರ್ ಶೆಟ್ಟಿ ಮತ್ತು ಪಾದೂರು ಕರ್ಮರಪಾಡಿ ವತ್ಸಲಾ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದಾರೆ.