ಉಡುಪಿ, ಸೆ.30: ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ನಟರಾಜ ಪ್ರಭು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದ್ರಾಳಿ ರೈಲ್ವೆ ಗೋದಾಮು ರಸ್ತೆಯ ಚೇಂಬರ್ ಕಟ್ಟಡದಲ್ಲಿರುವ ಹೆಬ್ರಿ ಆನಂದರಾಯ್ ಪೈ ಸ್ಮಾರಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಲಿ ಅಧ್ಯಕ್ಷ ಅಮ್ಮುಂಜೆ ಪ್ರಭಾರ ನಾಯಕ್ ನೂತನ ಅಧ್ಯಕ್ಷರಿಗೆ ಅಧಿಕಾರವನ್ನು ಮಂಗಳವಾರ ಹಸ್ತಾಂತರಿಸಿದರು.

ಉಪಾಧ್ಯಕ್ಷರಾಗಿ ಡಾ.ವಿಜಯೇಂದ್ರ ವಸಂತ್ ರಾವ್, ಗೌರವ ಕಾರ್ಯದರ್ಶಿಯಾಗಿ ಸಮೀರ್ ಮುಹಮ್ಮದ್, ಜಂಟಿ ಕಾರ್ಯದರ್ಶಿ ಯಾಗಿ ಅನೀಶ್ ಪೈ, ಅವಿನಾಶ್ ಪೂಜಾರಿ, ಖಜಾಂಚಿಯಾಗಿ ವಿನೋದ್ ಪೈ, ನಿರ್ದೇಶಕರಾಗಿ ಸುಭಾಷ್ ಎಂ.ಕಾಮತ್, ನಾಗರಾಜ್ ಹೆಬ್ಬಾರ್ ಮರವಂತೆ, ಪ್ರಕಾಶ್ಚಂದ್ರ ಶೆಟ್ಟಿ, ಶ್ರೀಪತಿ ಭಟ್ ವಾಲ್ಟರ್ ಸಲ್ದಾನಾ, ಸಂತೋಷ್ ಶೆಟ್ಟಿ, ಅತುಲ್ ಭಕ್ತ, ಆನಂದ ಕಾರ್ನಾಡ್, ಚಂದನ್ ಶೆಟ್ಟಿರ್ಗಾ, ಶಿವಪ್ರಸಾದ್ ಶೆಟ್ಟಿ ತಲ್ಲೂರು ಆಯ್ಕೆಯಾದರು.

ಚೇಂಬರ್ ಖಜಾಂಚಿ ಕೆ. ವಿನೋದ್ ಪೈ ಲೆಕ್ಕಪತ್ರ ಮಂಡಿಸಿದರು. ರಾಜ್ಯ ಸಮಿತಿಯ ಅಂಡಾರು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಚೇಂಬರ್ ಗೌರವ ಕಾರ್ಯದರ್ಶಿ ಡಾ.ವಿಜಯೇಂದ್ರ ವಸಂತ ಕಾರ್ಯಕ್ರಮ ನಿರೂಪಿಸಿದರು. ಚೇಂಬರ್ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ಸ್ವಾಗತಿಸಿದರು. ಸಂತೋಷ್ ಚುನಾವಣಾಧಿಕಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor