ಅಂದರ್ ಬಾಹರ್: ಆರು ಮಂದಿ ವಶಕ್ಕೆ
ಮಣಿಪಾಲ, ಸೆ.30 ಇಂದ್ರಾಳಿ ರೈಲ್ವೆ ಗೋಡಾನ್ ಎಂಬಲ್ಲಿ ಸೆ.29ರಂದು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಲ್ಲಿಕಾರ್ಜುನ ಬಸವನಗೌಡ, ಭರತ್ ಕುಮಾರ್ ಬಿ.ಎಚ್., ವಸಂತ ಕೋಟ್ಯಾನ್, ಜಗದೀಶ ಮಲ್ಲಪ್ಪ ಕಟಾಪುರ, ಅಮೀತ್ ಬಿ., ಶಿವಕುಮಾರ್ ವಶಕ್ಕೆ ಪಡೆದ ಆರೋಪಿಗಳು. ಇವರಿಂದ 6690ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.